ದಾಂಡೇಲಿ : ನಗರದ ಡಾ.ಜಿ.ವಿ.ಭಟ್ ಆಸ್ಪತ್ರೆಯಲ್ಲಿ ಜೂ.15ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹುಬ್ಬಳ್ಳಿಯ ಖ್ಯಾತ ಮಧುಮೇಹ ಮತ್ತು ಹಾರ್ಮೋನ್ ತಜ್ಞರಾದ ಡಾ.ಚಂದನ ಕಾಮತ್ ಆರೋಗ್ಯ ಸೇವೆಗೆ ಲಭ್ಯರಿರುತ್ತಾರೆ.
ಹುಬ್ಬಳ್ಳಿಯ ಎಂಡೋಕ್ರೈನ್ & ಡಯಾಬಿಟಿಸ್ ಕ್ಲಿನಿಕ್ ಇಲ್ಲಿಯ ತಜ್ಞ ವೈದ್ಯರಾಗಿರುವ ಡಾ.ಚಂದನ ಕಾಮತ್ ಅವರು ಮಧುಮೇಹ ಹಾಗೂ ಹಾರ್ಮೋನ್ ಎಂಡೋಕ್ರೈನ್ ಅಂಡ್ ಡಯಾಬಿಟಿಸ್ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳ ಕುರಿತಂತೆ ಅಗತ್ಯ ಆರೋಗ್ಯ ಸಲಹೆ ಸೂಚನೆಯೊಂದಿಗೆ ಹಾಗೂ ತಪಾಸಣೆಯನ್ನು ನಡೆಸಲಿದ್ದಾರೆ.