Slide
Slide
Slide
previous arrow
next arrow

ಅಪಘಾತ ವಲಯದಿಂದ ಹೊರಬರದ ರಸ್ತೆ: ವಾಹನ ಸವಾರರ ಪರದಾಟ

300x250 AD

ಶಿರಸಿ:  ಶಿರಸಿ -ಕುಮಟಾ ರಸ್ತೆ  ಪ್ರಸ್ತುತ  ಭಾರಿ ವಾಹನಗಳ ಸಂಚಾರವಿರುವ ಪ್ರದೇಶವಾಗಿ ಬದಲಾವಣೆಯಾಗಿ ಹೊಂದುತ್ತಿದೆ.

ಆದರೆ ಹಾರುಗಾರ ಸಮೀಪದ ಪ್ರದೇಶದಲ್ಲಿ ಮಾತ್ರ ಇದ್ದ ಉತ್ತಮ ರಸ್ತೆ ಇನ್ನೂ ಉತ್ತಮವಾಗುವುದರ ಬದಲು ಈ ಮಳೆಗಾಲವೂ ಅಪಘಾತ ಪ್ರದೇಶವಾಗಿಯೇ ಮುಂದುವರೆದಿದೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.ಕಳೆದ ಮಳೆಗಾಲವೂ ಇದೇ ರೀತಿಯಾಗಿ ಕೆಲವೊಂದು ಅಪಘಾತಗಳಾದರೂ  ಸಂಬಂಧಿಸಿದವರು ಎಚ್ಚತ್ತುಕೊಂಡಿಲ್ಲ. ಸುಧಾರಣೆಗಳು ಹಾಗಿರಲಿ  ಹೊಂಡ ಮುಚ್ಚುವುದನ್ನೂ ಮರೆಯಲಾಗಿದೆ.

ವೇಗವಾಗಿ ಬರುವ ಎಲ್ಲ ರೀತಿಯ ವಾಹನಗಳಿಗೆ ಇದು ಅಪಾಯಕಾರಿಯಾಗಿದೆ. ಕೇವಲ ಬ್ಯಾರಿಕೇಡ್ ಹಾಕಿಬಿಟ್ಟರೆ ಸಮಸ್ಯೆ ಪರಿಹಾರವಾಗದು. ಇವು ಭಾರಿ ವಾಹನಗಳಿಗೆ ನಿಯಂತ್ರಣ ತಪ್ಪಲು ಕಾರಣವಾಗಿ ಬ್ಯಾರಿಕೇಡ್ ದೂರ ಹಾರಿಹೋದ ಉದಾಹರಣೆಗಳು ಕೂಡ ಇವೆ ಎನ್ನಲಾಗಿದೆ.  ಒಂದು ವರ್ಷದ ಅವಧಿಯಲ್ಲಿ  ಪ್ರದೇಶದ ರಸ್ತೆಯಾಗಿ ನಿರ್ಲಕ್ಷಿಸಲಾಗಿದೆ. ಮೇಲು ಸೇತುವೆಯಾಗುತ್ತದೆ ಎಂಬ ವದಂತಿ ಕಾರ್ಯರೂಪಕ್ಕೆ ಬಂದಿಲ್ಲ, ಕನಿಷ್ಟವಾಗಿ  ರಸ್ತೆಗೆ ಕಾಂಕ್ರೀಟ್ ಹಾಕಬಹುದಿತ್ತಲ್ಲ, ಅದಿರಲಿ ಕಣ್ಣೊರೆಸಲು ತೇಪೆಯನ್ನಾದರೂ ಹಾಕಬಹುದಿತ್ತು ಎಂಬುದು ರಸ್ತೆ ಬಳಕೆದಾರರ ಅಭಿಪ್ರಾಯವನ್ನೂ ಮರೆಯಲಾಗಿದೆ.

300x250 AD

ಇದೇ ರೀತಿಯ ಸಮಸ್ಯೆಹೊಂದಿರುವ ನೀಲೆಕಣಿಯ ಸರಕಾರಿ ಶಾಲೆಯ ಎದುರು ರಸ್ತೆ ಕೂಡ ಅರ್ಧಂಬರ್ಧವಾಗಿದೆ. ಶಾಲಾಮಕ್ಕಳು ತಿರುಗಾಡುವ ರಸ್ತೆ ಇದಾದುದರಿಂದ, ನಿರ್ಲಕ್ಷಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.ಇನ್ನಾದರೂ ಸಂಬಂಧಿಸಿದವರು  ಇದನ್ನು ಗಮನಿಸಿ ಶಿರಸಿಯಿಂದ ಕುಮಟಾದ ವರೆಗೂ ಇರುವ ಹೆದ್ದಾರಿ ಸಮಸ್ಯೆನ್ನು ಬಗೆಹರಿಸಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top