Slide
Slide
Slide
previous arrow
next arrow

ಪರಿಸರ ಬೆಳೆಸುವುದರ ಜೊತೆ ಪಾಲನೆ-ಪೋಷಣೆ ಮಾಡಿ: ಹರೀಶ್ ನಾಯ್ಕ್

300x250 AD

ಸಿದ್ದಾಪುರ : ಪ್ರತಿಯೊಬ್ಬರು ಪರಿಸರ ಬೆಳೆಸುವುದರ ಜೊತೆಗೆ ಪಾಲನೆ ಪೋಷಣೆ ಮಾಡಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕು. ಜೊತೆಯಲ್ಲಿ ವಿದ್ಯಾರ್ಥಿಗಳಾದ ನೀವು  ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂತ ದೇಹವನ್ನು ಕಾಪಾಡಿಕೊಂಡು ಓದಿನಲ್ಲಿ ಸಾಧನೆಯನ್ನ ಮಾಡಿ ಹೆತ್ತ ತಂದೆ ತಾಯಿಗೆ ಆಸರೆ ಆಗಬೇಕು. ಹಳ್ಳಿಯ ಮಕ್ಕಳು ದೇಶ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಸಮಾಜ ಸೇವಕ ಹರೀಶ ನಾಯ್ಕ ಹಸ್ವಿಗುಳಿ  ಹೇಳಿದರು.

ಅವರು  ಹಳ್ಳಿಬೈಲ ಸರಕಾರಿ ಪ್ರೌಢಶಾಲೆಯಲ್ಲಿ ನಾಡದೇವಿ ಹೋರಾಟ ವೇದಿಕೆ ಹಾಗೂ ಶಾಲೆಯ ಸಹಕಾರದೊಂದಿಗೆ ಪರಿಸರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಆವರಣದಲ್ಲಿ ಗಿಡ ನೆಟ್ಟು ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ಜಲನಯನ ಇಲಾಖೆಯ ನಿವೃತ್ತ ಅಧಿಕಾರಿ ಐ.ಕೆ. ನಾಯ್ಕ ಕೊಠಾರಿ ಮಾತನಾಡಿ ವಿದ್ಯಾರ್ಥಿಗಳು ನೆಟ್ಟ ಗಿಡಗಳ ಪಾಲನೆ ಮಾಡಬೇಕು ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಗಮನಿಸಿ ಕಾಲಕಾಲಕ್ಕೆ ಯಾವ ಗಿಡ ನೀಡಬೇಕು ಪೋಷಣೆ ಮಾಡಬೇಕು ಎಂದು ತಿಳಿದುಕೊಳ್ಳಬೇಕು ಮತ್ತು ಸಂಸ್ಕಾರ ಅಳವಡಿಸಿಕೊಂಡು ವಿನಯವಂತರಾಗಿ ಸದ್ಬುದ್ಧಿ ಬಳಸಿಕೊಳ್ಳಬೇಕು ಎಂದರು.

 ಮುಖ್ಯ ಅತಿಥಿ ಸೋವಿನಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ  ರವಿ ನಾಯ್ಕ ಹೆಗ್ಗಾರ್ ಕೈ  ಮಾತನಾಡಿ ಪರಿಸರದಲ್ಲಿ ಇಂದು ಮಾನವನು  ಉಪಯೋಗಿಸುವ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಜಲಚರಗಳು ಸಮಸ್ಯೆಯನ್ನು ಎದುರಿಸುತ್ತಿವೆ. ಅಲ್ಲದೆ ಅದು ಪ್ರಕೃತಿಯ ಮೇಲೆ ಪರಿಣಾಮವನ್ನು ಬೀರುತ್ತದೆ, ಇದ್ದ ಪರಿಸರವನ್ನು ಸಂರಕ್ಷಣೆ ಮಾಡಬೇಕು ಜೊತೆಯಲ್ಲಿ ಹಣ್ಣು ಔಷಧಿಗಿಡಗಳನ್ನು ಹೆಚ್ಚು ಹೆಚ್ಚು ನೆಡಬೇಕು. ಎಲ್ಲರೂ ಪರಿಸರ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು ಎಂದರು.

300x250 AD

ನಾಡದೇವಿ ಹೋರಾಟ ವೇದಿಕೆ ಗೌರವಾಧ್ಯಕ್ಷ ಲಕ್ಷ್ಮಣ ನಾಯ್ಕ ಬೇಡ್ಕಣಿ   ಮಾತನಾಡಿ ನಮ್ಮ ಭಾಗದಲ್ಲಿ ಅರಣ್ಯ ಪ್ರಮಾಣ ಜಾಸ್ತಿ ಕಂಡರೂ ಸಹಿತ ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿಗೆ ಅರಣ್ಯ ನಾಶವಾಗುತ್ತಿರುತ್ತದೆ ಸಮೃದ್ಧವಾದ ಮಳೆ ಬೆಳೆ ಆಗಬೇಕು ಎಂದರೆ ಅರಣ್ಯವನ್ನ ಬೆಳೆಸಬೇಕು ಜೊತೆಯಲಿ ಅದನ್ನು ಉಳಿಸುವ ರಕ್ಷಿಸುವ ಜವಾಬ್ದಾರಿಯನ್ನ ಎಲ್ಲರೂ ಹೊಂದಬೇಕು ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡಬೇಕು ಎಂದರು.

 ಕಾರ್ಯಕ್ರಮದಲ್ಲಿ ಶಾಲಾ  ಪ್ರಭಾರ ಮುಖ್ಯಧ್ಯಾಪಕ ಚಂದ್ರಶೇಖರ ನಾಯ್ಕ, ನಾಡ ದೇವಿ ಹೋರಾಟ ವೇದಿಕೆ ಅಧ್ಯಕ್ಷ ಅನಿಲ್ ಕೊಠಾರಿ ಮಾತನಾಡಿದರು. ಇಕೋ ಕ್ಲಬ್ ಮುಖ್ಯಸ್ಥೆ  ಅಪರ್ಣ ಶಾಸ್ತ್ರೀ  ಉಪಸ್ಥಿತರಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ನರಹರಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಗಣೇಶ್ ಹೆಗಡೆ ನಿರೂಪಿಸಿದರು,  ಗೋಪಾಲ ನಾಯ್ಕ ಸ್ವಾಗತಿಸಿದರು,  ವಿನಾಯಕ ನಾಯ್ಕ ವಂದಿಸಿದರು 

Share This
300x250 AD
300x250 AD
300x250 AD
Back to top