Slide
Slide
Slide
previous arrow
next arrow

ಕೊಳಗೀಬೀಸ್‌ ಮಾರುತಿ ದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಸಂಪನ್ನ

300x250 AD

ಶಿರಸಿ: ತಾಲೂಕಿನ ಕೊಳಗಿಬೀಸ್ ಮಾರುತಿ ದೇವರ ಮೂರ್ತಿ ಪ್ರತಿಷ್ಟಾಪನೆಯ ವಾರ್ಷಿಕ ಮಹೋತ್ಸವವು  ಮಂಗಳವಾರ ಭಕ್ತಿ, ಶ್ರದ್ದೆಯಿಂದ ನೆರವೇರಿತು.

ಮಾರುತಿಮೂರ್ತಿಯನ್ನು ಮಂತ್ರ, ಸ್ತೋತ್ರ ಪಠಣ, ರಾಮಾಷ್ಟಕ ಪಾರಾಯಣ ಮುಂತಾದ ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ಗರ್ಭಗುಡಿಯಿಂದ ಹೊರತರಲಾಯಿತು. ವಿಶೇಷವಾಗಿ ಅಲಂಕೃತ ರಥದಲ್ಲಿರಿಸಿ ಪ್ರದಕ್ಷಿಣೆಯೊಂದಿಗೆ ಆಸೀನನಾಗಿದ್ದ ದೃಶ್ಯವನ್ನು ಭಕ್ತರು ಜೈಘೋಷದೊಂದಿಗೆ ಸಂಭ್ರಮಿಸಿದರು. ಇದಾದನಂತರ ಮೂರ್ತಿಯನ್ನು ಶ್ರೀಧರರ ಸ್ವಾಮೀಜಿಯವರ ಪೀಠಕ್ಕೆ ಕರೆದೊಯ್ದು ಶ್ರೀರಾಮನೊಂದಿಗೆ ಆಂಜನೇಯ ಮೂರ್ತಿಯನ್ನು ಇಟ್ಟು ಪೂಜೆ, ಅರ್ಚನೆ,ಭಜನೆ, ಅಷ್ಟಾವಧಾನ ಸೇವೆ,  ಮಾತೆಯರಿಂದ ಭಕ್ತಿ ಭಜನೆಯು ನಡೆಯಿತು. 

ಬೆಳಗಿನಿಂದಲೂ ಪ್ರಾರಂಭಗೊಂಡ ಉತ್ಸವವು ದೇವಸ್ಥಾನದ ಮುಖ್ಯ ಅರ್ಚಕ ವೇ.ಮೂ. ಕುಮಾರ ಭಟ್ ನೇತೃತ್ವದಲ್ಲಿ  ನಡೆಯಿತು.ಹಲವು ವರ್ಷಗಳ ಹಿಂದೆ ಅವಧೂತರು ಹಾಗೂ ಶ್ರೀಧರ ಸ್ವಾಮಿಗಳ ನೇತೃತ್ವದಲ್ಲಿ  ಮಾರುತಿ ಮೂರ್ತಿಯ ಪ್ರತಿಷ್ಟಾಪನೆ ನಡೆದುದನ್ನು  ಹಿರಿಯ ಭಕ್ತರು ತಮ್ಮ ಪೂರ್ವಜರು ಹೇಳಿದ್ದನ್ನು ನೆನಪಿಸಿಕೊಂಡರು.

300x250 AD

 ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ ಹೆಗಡೆ ಇಳೆಮನೆ, ಪದಾಧಿಕಾರಿಗಳು ಹಾಗು ಇತರರು ಉಪಸ್ಥಿತರಿದ್ದರು. ಟಿ. ಎಸ್.ಎಸ್ ಅಧ್ಯಕ್ಷ  ಗೋಪಾಲಕೃಷ್ಣ ವೈದ್ಯ ಹಾಗು ಇತರ ಗಣ್ಯರು ಆಗಮಿಸಿದ್ದರು.

Share This
300x250 AD
300x250 AD
300x250 AD
Back to top