ಶಿರಸಿ: ಇಲ್ಲಿನ ಎಂಇಎಸ್ ಸಂಸ್ಥೆಯ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ ವಿದ್ಯಾರ್ಥಿಗಳಿಗಾಗಿ ಶಾಲಾ ಬಸ್ ಸೇವೆಯನ್ನು ಸಂಸ್ಥೆ ಆರಂಭಿಸಿದೆ. ಎಂಇಎಸ್‌ಗೆ ಹೊಸ ಬಸ್ ಬಂದಿದ್ದು ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ, ಉಪಾಧ್ಯಕ್ಷ ನಿತಿನ್ ಕಾಸರಗೋಡು, ಉಪಸಮಿತಿ ಅಧ್ಯಕ್ಷ ದೀಪಕ್ ದೊಡ್ಡೂರ್, ಡಿ.ಎಂ.ಭಟ್ ಪದಾಧಿಕಾರಿಗಳು, ಶಿಕ್ಷಕರ ಶಿಕ್ಷಕೇತರ ಸಿಬ್ಬಂದಿಗಳು ನೂತನ ಬಸ್ ಅನ್ನು ಬರಮಾಡಿಕೊಂಡರು. ಸದ್ಯದಲ್ಲಿಯೇ ಈ ಬಸ್ಸಿನ ಸೇವೆ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.
ಎಂಇಎಸ್ ಪ್ರಾಥಮಿಕ, ಮಾಧ್ಯಮಿಕ ವಿದ್ಯಾರ್ಥಿಗಳಿಗೆ ಬಸ್ ಸೇವೆ ಪ್ರಾರಂಭ
