ಬನವಾಸಿ: ನಮ್ಮ ಸುತ್ತಮುತ್ತನಲ್ಲಿರುವ ನೈಸರ್ಗಿಕ ತಾಣವನ್ನು ನೋಡಲು ಹೊರ ರಾಜ್ಯ ಹಾಗೂ ದೇಶ, ವಿದೇಶಗಳಿಂದ ಬರುತ್ತಾರೆ ಎಂದರೆ ಅದಕ್ಕೆ ಕಾರಣ ಇಲ್ಲಿನ ಪರಿಸರ ಸಂಪತ್ತು ಇದನ್ನು ಇನ್ನಷ್ಟು ಬೆಳೆಸಿ ಉಳಿಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಂದು ಡಬ್ಲ್ಯೂಎಚ್ಆರ್ ಆರ್.ಕೆ ಫೌಂಡೇಶನ್ ನ ಜಿಲ್ಲಾಧ್ಯಕ್ಷೆ ಅರ್ಚನಾ ಜಯಪ್ರಕಾಶ್ ನಾಯ್ಕ್ ಹೇಳಿದರು.
ಅವರು ಡಬ್ಲ್ಯೂಎಚ್ಆರ್ ಆರ್.ಕೆ ಫೌಂಡೇಶನ್ ಬನವಾಸಿ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಈ ಪರಿಸರ ಮುಂದಿನ ತಲೆಮಾರಿನವರಿಗೆ ಉಳಿಯುವ ಉದ್ದೇಶದಿಂದ ಇಂತಹ ಕಾರ್ಯಕ್ರಮದ ಮೂಲಕ ನಮ್ಮ ಜವಾಬ್ದಾರಿಯನ್ನ ಸಮರ್ಥವಾಗಿ ನಿರ್ವಹಿಸಬೇಕಾಗಿದೆ. ಅತ್ಯಗತ್ಯವಾಗಿ ನಾವೆಲ್ಲರೂ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಡಬ್ಲ್ಯೂಎಚ್ಆರ್ ಆರ್.ಕೆ ಫೌಂಡೇಶನ್ ಬನವಾಸಿ ಘಟಕದ ಅಧ್ಯಕ್ಷೆ ಸೀಮಾವತಿ ಕೆರೊಡಿ ಮಾತನಾಡಿ, ಇಂದು ನಮಗೆ ನಮ್ಮ ಸುತ್ತಮುತ್ತಲಿನಲ್ಲಿ ಸಾಕಷ್ಟು ಅರಣ್ಯ ಇದೆ ಎಂದು ಎನಿಸಬಹುದು ಆದರೆ ದಶಕಗಳು ಕಳೆದಂತೆ ಜನಸಂಖ್ಯೆ ಹೆಚ್ಚಳ, ಕಾರ್ಖಾನೆಗಳು, ಪ್ಲಾಸ್ಟಿಕ್ ಉತ್ಪನ್ನ ಬಳಕೆಯಿಂದ ಶುದ್ಧ ಗಾಳಿ, ನೀರನ್ನು ಹಣ ನೀಡಿ ಖರೀದಿಸುವಂತ ಸ್ಥಿತಿ ಬರಬಹುದು ಆ ಸ್ಥಿತಿಗೆ ತಲುಪಬಾರದು ಎಂದರೆ ನಾವು ಪ್ರತಿಯೊಬ್ಬರು ಇಂದಿನಿಂದಲೇ ಒಂದೊಂದು ಗಿಡ ನೆಡಬೇಕು ಅದರ ಪಾಲನೆ ಮಾಡಬೇಕು ಜೊತೆಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಈ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಡಬ್ಲ್ಯೂಎಚ್ಆರ್ ಆರ್.ಕೆ ಫೌಂಡೇಶನ್ ಬನವಾಸಿ ಘಟಕದ ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ, ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಡಬ್ಲ್ಯೂಎಚ್ಆರ್ ಆರ್.ಕೆ ಫೌಂಡೇಶನ್ ನ ಪದಾಧಿಕಾರಿಗಳು, ಸದಸ್ಯರು ಇದ್ದರು.