Slide
Slide
Slide
previous arrow
next arrow

ಪರಿಸರ ರಕ್ಷಣೆಯ ಹೊಣೆ ಪ್ರತಿಯೊಬ್ಬರ ಮೇಲಿದೆ: ಬಿ.ಕೆ.ಸಂತೋಷ್

300x250 AD

ಕಾರವಾರ: ಜಿಲ್ಲಾಡಳಿತ ಉತ್ತರಕನ್ನಡ, ಕರ್ನಾಟಕರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿಕಾರವಾರ, ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರ ಹಾಗೂ ಕಾರವಾರ ಎಜ್ಯುಕೇಶನ್ ಸೊಸೈಟಿಯ ಬಾಲಮಂದಿರ ಪ್ರೌಢಶಾಲೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಪರಿಸರ ದಿನಾಚರಣೆ 2024 ರ ಪ್ರಯುಕ್ತ ಕಾರವಾರ ತಾಲೂಕಿನ ಬಾಲಮಂದಿರ ಪ್ರೌಢಶಾಲೆ, ಶ್ರೀಮತಿ ಸುಮತಿದಾಮ್ಲೆ ಬಾಲಕೀಯರ ಪ್ರೌಢಶಾಲೆ ಹಾಗೂ ಹಿಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಮತ್ತು ವಿಶೇಷ ಪರಿಸರ ಉಪನ್ಯಾಸ ಕಾರ್ಯಕ್ರಮವು ಬುಧವಾರ ಬಾಲಮಂದಿರ ಪ್ರೌಢಶಾಲೆ ಕಾರವಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನಿಡಿದ, ಜಿಲ್ಲಾ ಪರಿಸರ ಅಧಿಕಾರಿ ಬಿ.ಕೆ. ಸಂತೋಷ್ , ಮನೆಯಲ್ಲಿ ಉತ್ಪಾದನೆ ಆದ ಘನತ್ಯಾಜ್ಯಗಳನ್ನು ಹಸಿ ಕಸ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು, ಪ್ಲಾಸ್ಟಿಕ್ ವಸ್ತುಗಳ ನಿಷೇಧವಾದರೂ ಸಹ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಲಾಗುತ್ತಿದೆ. ಕೇವಲ ಬಟ್ಟೆ ಚೀಲಗಳನ್ನು ಬಳಸಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ಬಳಸಬೇಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿದ್ಯುತ್‌ನ್ನು ಮಿತವಾಗಿ ಬಳಸಿ, ನೀರನ್ನು ಸಹ ಮಿತವಾಗಿ ಬಳಸಿ ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲ ಸಂರಕ್ಷಿಸಬೇಕು. ವಿಶ್ವ ಪರಿಸರ ದಿನಾಚರಣೆ 2024 ರ ವಿಷಯವು “ನಮ್ಮ ಭೂಮಿ ನಮ್ಮ ನಮ್ಮ ಭವಿಷ್ಯ” ಅದರಲ್ಲಿ “ಭೂ ಮರುಸ್ಥಾಪನೆ, ಮರು-ಭೂಮೀಕರಣ ಮತ್ತು ಬರ ತಡೆಯುವಿಕೆ” ಆಗಿದ್ದು ನಾವು ಈಗಾಗಲೇ ನೀರು ಖಾಲಿ ಮಾಡಿ ಬರ ಬರುವಂತೆ ಪರಿಸ್ಥಿತಿ ಎದುರಾಗಿದೆ ಮತ್ತು ಭೂಮಿಯನ್ನು ಮರು ಸ್ಥಾಪನೆ ಮಾಡುವ ಸಂದರ್ಭ ಬಂದಿದೆ. ಆದ್ದರಿಂದ ಪರಿಸರಕ್ಕೆ ಹಾನಿ ಆಗುವ ಯಾವುದೇ ಕೆಲಸಗಳನ್ನು ಮಾಡಬಾರದು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಉಪ ಪರಿಸರ ಅಧಿಕಾರಿ ಡಾ.ಗಣಪತಿ ಹೆಗಡೆ ಮಾತನಾಡಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ, ಕಾರವಾರ ಇವರು ಪರಿಸರ ಎಂದರೇನು, ಭೂಮಿಯ ಪರಿರಸದ ವಲಯಗಳನ್ನು ಸವಿಸ್ತಾರವಾಗಿ ತಿಳಿಸಿ ಪರಿಸರವನ್ನು ಸಂರಕ್ಷಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಎಷ್ಟು ಮುಖ್ಯವಾದದ್ದು, ವಿಶ್ವ ಪರಿಸರ ದಿನಾಚರಣೆಯನ್ನು ಏಕೆ ಆಚರಿಸಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಮನುಷ್ಯ ಹುಟ್ಟುವಾಗ, ಬೆಳೆಯುವಾಗ ಮತ್ತು ಸತ್ತ ನಂತರ ಮನುಷ್ಯನ ದೇಹ ಮಣ್ಣಾಗಲು ಸಹ ಪರಿಸರದ ಅವಶ್ಯಕತೆ ಇರುತ್ತದೆ ಎಂದು ಪರಿಸರವನ್ನು ಏಕೆ ಸಂರಕ್ಷಿಸಬೇಕು ಎಂದು ತಿಳಿಸಿದರು. ಹಿಂದಿನ ತಲೆಮಾರಿನವರು ದೇವರ ಕಾಡು ಎಂದು ಪರಿಸರವನ್ನು ಪೂಜಿಸುತ್ತಿದ್ದರು ಈಗಿನ ಪೀಳಿಗೆಯವರು ಸಹ ಪ್ರತಿ ದಿನ ಬೆಳಿಗ್ಗೆ ಎದ್ದ ಕೂಡಲೇ ಪರಿಸರವನ್ನು ದೇವರಂತೆ ಪೂಜಿಸಬೇಕು ಹಾಗೂ ಕೃತಜ್ಞತೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳು ಪರಿಸರ ಸ್ನೇಹಿಯಾಗುವ ನಿಟ್ಟಿನಲ್ಲಿ ಉಪನ್ಯಾಸ ನೀಡಿದರು.
ಘನತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ, ಇ-ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ ಹಾಗೂ ಜೀವ ವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆ ಮತ್ತು ಅವುಗಳ ವೈಜ್ಞಾನಿಕ ವಿಲೇವಾರಿ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರಿಗೂ ನೆಲ, ಜಲ ವಾಯು ಮಾಲಿನ್ಯ ಆಗದಂತೆ ದಿನನಿತ್ಯ ಪರಿಸರ ಸ್ನೇಹಿಯಾಗಿ ಜೀವನ ನಡೆಸುವುದು ಹಾಗೂ ಪರಿಸರವನ್ನು ಕಾಪಾಡುವುದಾಗಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಅಂಜಲಿ ಎಸ್. ಮಾನೆ ಮುಖ್ಯಾಧ್ಯಾಪಕಿ ಬಾಲಮಂದಿರ ಪ್ರೌಢಶಾಲೆ ಕಾರವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

300x250 AD

ಉಪ ಪ್ರಾದೇಶಿಕ ವಿಜ್ಞಾನಕೇಂದ್ರ ಕಾರವಾರದ ಶೈಕ್ಷಣಿಕ ಸಹಾಯಕಿ ಕವಿತಾ ಮೇಸ್ತ , ಸ್ವಾಗತಿಸಿದರು. ಭಾರತಿ ಐಸಾಕ್ ವಿಜ್ಞಾನ ಶಿಕ್ಷಕರು ಬಾಲಮಂದಿರ ಪ್ರೌಢಶಾಲೆ ಕಾರವಾರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.ಡಾ. ಅಮೃತಾಎಸ್. ಶೇಟ್ ಯೋಜನಾ ಸಹಾಯಕಿ ಕರ್ನಾಟಕರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ ಕಾರವಾರ ವಂದಿಸಿದರು.
ಸ್ಪರ್ಧೆಯ ವಿಜೇತರಿಗೆ ಪಾರಿತೋಷಕ ಪ್ರಶಸ್ತಿ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಚಿತ್ರಕಲಾ ಸ್ಪರ್ಧೆಯಲ್ಲಿ ಬಾಲಮಂದಿರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕುಮಾರ. ಪ್ರಜ್ವಲ್ ಪಿ. ಶೇಟ್, ಇವನಿಗೆ ಪ್ರಥಮ ಬಹುಮಾನ, ಕುಮಾರ ಆಯುಷ್ ವಿ. ರೇವಂಡಿಕರ, ಇವನಿಗೆ ದ್ವಿತೀಯ ಬಹುಮಾನ, ಕುಮಾರ. ರೋಹನ ಎಸ್. ಗೌಡ, ಇವನಿಗೆ ತೃತೀಯ ಬಹುಮಾನ, ಕುಮಾರಿ. ವೇದಿಕಾ ವಿ. ತಾಂಡೇಲ ಇವನಿಗೆ ಸಮಾಧಾನಕರ ಬಹುಮಾನ ಮತ್ತು ಕುಮಾರ ಶ್ರೇಯಸ್ ಎಸ್. ಗುನಗಿ ಇವನಿಗೆ ಮೆಚ್ಚುಗೆಯ ಬಹುಮಾನವನ್ನು ವಿತರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ಕುಮಾರಿ ಸುಫಿಯಾ ಜಿ. ಸೈಯದ್, ಇವಳಿಗೆ ಪ್ರಥಮ ಬಹುಮಾನ, ಕುಮಾರಿ ರಾಶಿ ಆರ್. ಪೇಡ್ನೇಕರ, ಇವಳಿಗೆ ದ್ವಿತೀಯ ಬಹುಮಾನ, ಕುಮಾರಿ. ಸೃಷ್ಠಿ ಕೆ. ಗೌರಯ್ಯ, ಇವಳಿಗೆ ತೃತೀಯ ಬಹುಮಾನ, ಕುಮಾರಿ ಕಾಂಚಿಕಾ ಆರ್. ನಾಯ್ಕ, ಇವಳಿಗೆ ಸಮಾಧಾನಕರ ಬಹುಮಾನ ಹಾಗೂ ಕುಮಾರಿ ಸೌಮ್ಯ ಎಸ್. ಕುರ್ಡೇಕರ ಇವಳಿಗೆ ಮೆಚ್ಚುಗಯ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬಾಲಮಂದಿರ ಪ್ರೌಢಶಾಲೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರವಾರದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top