ಯಲ್ಲಾಪುರ: ಗ್ರಾಮೀಣ ಪ್ರದೇಶದ ಜನರಿಗೆ ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸಲು ಹಾಗೂ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಯಲ್ಲಾಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಅಮೃತ ಸರೋವರ(ಕೆರೆ)ಗಳ ದಡದ ಮೇಲೆ ಗ್ರಾಮ ಪಂಚಾಯತಿಗಳ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬುಧವಾರ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು.
ತಾಲ್ಲೂಕಿನ ಉಮ್ಮಚಗಿ, ಚಂದಗುಳಿ, ಹಾಸಣಗಿ, ಕುಂದರಗಿ, ಕಿರವತ್ತಿ, ನಂದೊಳ್ಳಿ, ಮದ್ನೂರ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಅಮೃತ ಸರೋವರಗಳ ದಡದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ನೀರುಣಿಸಿದರು. ಜೊತೆಗೆ ಕೆರೆಯ ಸುತ್ತಲೂ ಸ್ವಚ್ಛತಾ ಕಾರ್ಯ ಕೈಗೊಂಡರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿಯ ತಾಂತ್ರಿಕ ಸಂಯೋಜಕ ನಾರಾಯಣ ತಾನೋಜಿ, ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ, ಕುಂದರಗಿ ಗ್ರಾಪಂ ಪಿಡಿಒ ರವಿ ಪಟಗಾರ, ತಾಂತ್ರಿಕ ಸಹಾಯಕರಾದ ಅನಸೂಯಾ ಸಿದ್ದಿ, ಪ್ರಕಾಶ ಹೆಗಡೆ, ಅಬ್ದುಲ್, ಬಿಎಫ್‌ಟಿ ವಿಠಲ್, ಈರಣ್ಣ, ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಹಾಸಣಗಿ ಗ್ರಾಪಂ ಉಪಾಧ್ಯಕ್ಷ ಪುರಂದರ ನಾಯ್ಕ, ಉಮ್ಮಚಗಿ ಗ್ರಾಪಂ ಸದಸ್ಯ ಖೈತಾನ್ ಡಿಸೋಜ, ಕಾರ್ಯದರ್ಶಿ ಮೋಹನ, ಸಿಬ್ಬಂದಿ ಅಣ್ಣಪ್ಪ, ಬಾಬು ಬಿಲ್ಲವ, ಚಂದಗುಳಿ ಗ್ರಾಪಂ ಕಾರ್ಯದರ್ಶಿ ತುಕಾರಾಮ ನಾಯ್ಕ, ಸಿಬ್ಬಂದಿ ರಾಮಕೃಷ್ಣ ಭಟ್, ತೇಜಶ್ ನಾಟೇಕರ, ಕುಮಾರಿ ನೂತನ, ಗ್ರಾಮಸ್ಥರಾದ ಶಿವರಾಮ ಹೆಗಡೆ, ಮಂಜುನಾಥ, ಹಾಸಣಗಿ ಗ್ರಾಪಂ ಬಿಲ್ ಕಲೆಕ್ಟರ್ ಈಶ್ವರ ನಾಯ್ಕ, ಸಿಬ್ಬಂದಿ ಬೀರು ಗೌಳಿ, ಕುಂದರಗಿ ಗ್ರಾಪಂ ಡಿಇಒ ಸಂತೋಷ ಸೇರಿದಂತೆ ತಾಂತ್ರಿಕ ಸಹಾಯಕರು, ಗ್ರಾಮಸ್ಥರು, ನರೇಗಾ ಕೂಲಿಕಾರರು ಹಾಜರಿದ್ದರು.