Slide
Slide
Slide
previous arrow
next arrow

ಸಿದ್ದಾಪುರದಲ್ಲಿ ಡಿ.ಎನ್. ಶೇಟರಿಗೆ ಶ್ರದ್ಧಾಂಜಲಿ ಸಭೆ

300x250 AD

ಸಿದ್ದಾಪುರ: ನಿವೃತ್ತ ಮುಖ್ಯಶಿಕ್ಷಕ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯದರ್ಶಿಗಳಾಗಿ ದುಡಿದ ಡಿ.ಎನ್. ಶೇಟ್ ಹಾಳದಕಟ್ಟಾ ಮೇ: 26ರಂದು ನಿಧನ ಹೊಂದಿದ್ದು, ಅವರ ಕುರಿತಾಗಿ ಶ್ರದ್ಧಾಂಜಲಿ ಸಭೆಯನ್ನು ಸ್ಥಳೀಯ ಟಿ.ಎಂ.ಎಸ್. ಸಭಾಭವನದಲ್ಲಿ ನೆರವೇರಿಸಲಾಯಿತು.

ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ ತಮಗೆ ಕಲಿಸಿದ ವಿದ್ಯಾಗುರುಗಳಾಗಿದ್ದು ಅವರ ಸ್ನೇಹ, ಸೌಜನ್ಯ, ಸರಳ ಸಜ್ಜನಿಕೆ ಹಾಗೂ ಕ್ರಿಯಾಶೀಲತೆ ನಮ್ಮೆಲ್ಲರಿಗೆ ಆದರ್ಶವಾಗಿದೆ ಹಾಗೂ ಅವರ ಶಿಸ್ತುಬದ್ಧ ಜೀವನ ನಮ್ಮೆಲ್ಲರಿಗೆ ಪ್ರೇರಕವಾಗಿದೆ ಎಂದು ಹೇಳಿದರು.
ತಾಲೂಕಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹಾಗೂ ಲಯನ್ಸ್ ಮಾಜಿ ಅಧ್ಯಕ್ಷರೂ ಆದ ಸಿ.ಎಸ್. ಗೌಡರ್ ಹೆಗ್ಗೋಡ್ಮನೆ ಮಾತನಾಡಿ ಡಿ.ಎನ್. ಶೇಟ್‌ರವರ ಸರಳತೆ, ಸೌಜನ್ಯ ಮತ್ತು ಸಾಮಾಜಿಕ ಕಳಕಳಿ ಆದರ್ಶವಾದ ಗುಣಗಳಾಗಿದ್ದು ಅದನ್ನು ನಾವು ಅಳವಡಿಸಿಕೊಳ್ಳುವುದರ ಮೂಲಕ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿಯಾಗಿದೆ ಎಂದು ಹೇಳಿದರು.
ನಿವೃತ್ತ ಪ್ರೌಢಶಾಲಾ ಶಿಕ್ಷಕ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿ ಅವರು ಪ್ರೌಢಶಾಲೆಯಲ್ಲಿ ಹಿಂದಿ ಬೋಧನೆಯನ್ನು ಮಾಡುವಾಗ ಯಾವುದೇ ಪಠ್ಯಪುಸ್ತಕಗಳನ್ನು ತರಗತಿಗೆ ತರದೆ ಪಠ್ಯದ ಯಥಾವಸ್ತುವನ್ನು ಮಕ್ಕಳಿಗೆ ವಿವರಿಸುವ ಕಲೆ ಆದರ್ಶವಾಗಿತ್ತು ಮತ್ತು ಅವರ ಸಾಮಾಜಿಕ ಕಳಕಳಿಯ ಬಗ್ಗೆ ಹೇಳಿದರು.
ರಮೇಶ ರಾಯ್ಕರ ಅವರು ಮಾತನಾಡಿ ದೈವಜ್ಞ ಸಮಾಜದ ಒಬ್ಬ ಕ್ರಿಯಾಶೀಲ ವ್ಯಕ್ತಿಯನ್ನು ಕಳೆದುಕೊಂಡಿದ್ದರಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಕ.ಸಾ.ಪ. ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಅವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಟಿ.ಕೆ. ಮಹಮೂದ ಅವರ ಜಿಲ್ಲಾ ಅಧ್ಯಕ್ಷತೆಯ ಸಮಯದಲ್ಲಿ 13 ವರ್ಷಗಳ ಕಾಲ ಜಿಲ್ಲಾ ಕಾರ್ಯದರ್ಶಿಯಾಗಿ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಮತ್ತು ಯುವಜನರನ್ನು ಪ್ರೋತ್ಸಾಹಿಸುವಲ್ಲಿ ಸಹಕರಿಸಿದರು ಎಂದು ಅವರ ಸಾಹಿತ್ಯ ಸೇವೆಯನ್ನು ಬಣ್ಣಿಸಿದರು.
ಪತ್ರಕರ್ತ ಕನ್ನೇಶ ಕೋಲಸಿರ್ಸಿ, ನಿವೃತ್ತ ನೌಕರರ ಸಂಘದ ಸದಸ್ಯ ನಾಗರಾಜ ಗೌಡರ್ ಕೋಲಸಿರ್ಸಿ, ಜಿಲ್ಲಾ ನಿವೃತ್ತ ಬಿ.ಸಿ.ಎಂ. ಅಧಿಕಾರಿ ಡಿ.ವಿ. ಶೇಟ್, ನಿವೃತ್ತ ಮುಖ್ಯ ಶಿಕ್ಷಕ ಎನ್. ವಿ. ಹೆಗಡೆ, ನಿವೃತ್ತ ಶಿಕ್ಷಣ ಸಂಯೋಜಕ ಜಿ.ಎಂ. ಕುಮಟಾಕರ, ಪಟ್ಟಣ ಪಂಚಾಯತ ಸದಸ್ಯ ನಂದನ ಬೋರಕರ, ಶಿಕ್ಷಕ ಮಹೇಶ ಶೇಟ್, ವಣಿಕ ಸಂಘದ ಉಪಾಧ್ಯಕ್ಷ ವಿನಾಯಕ ಶೇಟ, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಾಂತಾರಾಮ ಶೇಟ, ದೈವಜ್ಞ ಬ್ರಾಹ್ಮಣ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ವಿಜಯಾ ರಾಯ್ಕರ, ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ವಿ.ಎಸ್. ಶೇಟ್ ಹಾಗೂ ದೈವಜ್ಞ ಸಮಾಜ ಬಾಂಧವರು ಅನೇಕರು ಉಪಸ್ಥಿತರಿದ್ದರು.
ವೀಣಾ ಕಾರ್ಯಕ್ರಮ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top