Slide
Slide
Slide
previous arrow
next arrow

ಭಾವಪರವಶಗೊಳಿಸಿದ ಭಕ್ತಿ ಸಂಗೀತ, ಯಕ್ಷ ಸಂಗೀತ ಲಹರಿ

300x250 AD

ಶಿರಸಿ: ನಾದವಾಧಾನ ಪ್ರತಿಷ್ಠಾನ ಕುಂದಾಪುರ ಇವರ ಸಂಯೋಜನೆಯಲ್ಲಿ ಕಂಪ್ಲಿಯ ಚುಂಚಿಗದ್ದೆ ಆರ್.ಎಸ್.ಹೆಗಡೆ ಮನೆಯಂಗಳದಲ್ಲಿ ಖ್ಯಾತ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ದಿ.ನಾರಾಯಣ ಸುಬ್ರಾಯ ಹೆಗಡೆ ಇವರ ಸ್ಮರಣಾರ್ಥ ಏರ್ಪಡಿಸಿದ್ದ ಭಕ್ತಿ ಸಂಗೀತ ಹಾಗೂ ಯಕ್ಷ ಸಂಗೀತ ಲಹರಿ ಕಾರ್ಯಕ್ರಮ ತುಂಬಿದ ಸಂಗೀತಾಭಿಮಾನಿಗಳ ಮನಸೊರೆಗುಳ್ಳುವಲ್ಲಿ ಯಶಸ್ವಿಯಾಗಿದೆ.

ಯಕ್ಷಗಾನ ಮಹಿಳಾ ಭಾಗವತಿಗೆ ಕ್ಷೇತ್ರದಲ್ಲಿ ತನ್ನ ಹೆಜ್ಜೆಗುರುತು ಮೂಡಿಸುತ್ತಿರುವ ಯುವ ಪ್ರತಿಭೆ ಸಿದ್ದಾಪುರದ ಭಾಗಿನಕಟ್ಟಾದ ಶ್ರೀರಕ್ಷಾ ಹೆಗಡೆ ಆರಂಭಿಕವಾಗಿ ಶಾಸ್ತ್ರೀಯ ಸಂಗೀತದ ಭಕ್ತಿಗೀತೆ ಕಾರ್ಯಕ್ರಮ ನಡೆಸಿಕೊಡುತ್ತ ಶಾಸ್ತ್ರೀಯ ಹಾಗೂ ಯಕ್ಷ ಕ್ಷೇತ್ರಕ್ಕೆ ಸೈ ಎನಿಸಿಕೊಂಡಳು. ಭಕ್ತಿ ಸಂಗೀತದಲ್ಲಿ ಜಯ ಜಯ ಗಣನಾಥ ಹಾಡಿನೊಂದಿಗೆ ಆರಂಭಿಸಿ, ನಂತರ ಜನಪ್ರಿಯವಾದ ಹಾಡು ಜಗದೋದ್ಧಾರ ಸಾಹಿತ್ಯವನ್ನು ಸುಂದರವಾಗಿ ಪ್ರಸ್ತುತಗೊಳಿಸಿದರು. ನಂತರದಲ್ಲಿ ಮರಾಠಿಯ ಅಭಂಗವೊಂದನ್ನು ಹಾಡಿ ಪ್ರೇಕ್ಷಕರ ಕರತಾಡನಕ್ಕೆ ಭಾಜನಳಾಗುತ್ತ ಭರತನಾಟ್ಯ ಹಾಗೂ ಸಂಗೀತದಲ್ಲಿ ಪ್ರಾಮುಖ್ಯತೆಯನ್ನು ಹೊಂದಿದ ತಂಬುರಿ ಮೀಟಿದವ ಹಾಡನ್ನು ಹಾಡಿ ಸಂಗೀತಾಭಿಮಾನಿಗಳಿಗೆ ರಸದೂಟ ಬಡಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ಶ್ರೀರಕ್ಷಾ ಗಾನಕ್ಕೆ ಕೀಬೋರ್ಡ್‌ನಲ್ಲಿ ಶಿವರಾಮ ಭಾಗವತ ಕನಕನಹಳ್ಳಿ, ತಬಲಾದಲ್ಲಿ ಗಣೇಶ ಗುಂಡ್ಕಲ್ ಯಲ್ಲಾಪುರ, ರೀದಂಪ್ಯಾಡ್‌ನಲ್ಲಿ ವಿ.ಟಿ.ಭಟ್ಟ ಆಯಾ ಹಾಡಿಗೆ ತಕ್ಕಂತೆ ಸಮರ್ಥವಾಗಿ ಸಾಥ್ ನೀಡಿದರು.

300x250 AD

ಭಕ್ತಿ ಸಂಗೀತದ ನಂತರದಲ್ಲಿ ಆರಂಭಗೊಂಡ ಯಕ್ಷ ಸಂಗೀತ ಲಹರಿ ಕಾರ್ಯಕ್ರಮದಲ್ಲಿ ಶ್ರೀರಕ್ಷಾ ಹೆಗಡೆ ಸಂಪ್ರದಾಯದಂತೆ ಗಣಪತಿಪೂಜೆ ಹಾಡಿನೊಂದಿಗೆ ಯಕ್ಷಗಾನ ಪದ್ಯಗಳನ್ನು ಹಾಡುತ್ತ ಪೀಠಿಕೆ ಪದ್ಯವಾಗಿ ಪಂಚವಟಿ ಪ್ರಸಂಗದ ಆಯ್ದ ಹಾಡುಗಳನ್ನು ಸೊಗಸಾಗಿ ಹಾಡಿದರು. ನಂತರ ಶೃಂಗಾರರಸವಾಗಿ ಸುಧನ್ವಾರ್ಜುನ ಪ್ರಸಂಗದ ಹಾಗೂ ರಾಮನ ಕುರಿತಾದ ಸ್ಮರಿಸಯ್ಯ ರಾಮಮಂತ್ರವನ್ನು ಮತ್ತು ಜನಾಪೇಕ್ಷೆ ಮೇರೆಗೆ ಬಂದ ಭೀಷ್ಮ ವಿಜಯದ ಪರಮಋಷಿ ಮಂಡಲದೊಳು ವನ್ನು ಭಾಮಿನಿಯಾಗಿ ಸೊಗಸಾಗಿ ಹಾಡಿ ಸಭೆಯನ್ನು ಮಂತ್ರಮುಗ್ದಗೊಳಿಸಿದರು. ಕೊನೆಯ ಮಂಗಲ ಪದ್ಯವನ್ನು ವೈಭವೀಕರಿಸಿ, ಕಾರ್ಯಕ್ರಮ ಸಮಾಸ್ತಿಗೊಳಿಸಿದಾಗ ಸಭೆಯ ಕರತಾಡನ ಕಾರ್ಯಕ್ರಮ ಯಶಸ್ಸನ್ನು ಸಾಕ್ಷೀಕರಿಸಿತು.
ಯಕ್ಷ ಸಂಗೀತ ಸಂದರ್ಭದಲ್ಲಿ ಮದ್ದಲೆಯಲ್ಲಿ ಕುಂದಾಪರ ನಾದಾವಧಾನ ಮುಖ್ಯಸ್ಥ ಎನ್.ಜಿ.ಹೆಗಡೆ ಯಲ್ಲಾಪುರ, ಚಂಡವಾದನದಲ್ಲಿ ಗಣೇಶ ಗಾಂವ್ಕರ ಹಳವಳ್ಳಿ ಹಾಗೂ ತಬಲಾದಲ್ಲಿ ಗಣೇಶ ಗುಂಡ್ಕಲ್ ವೈವಿದ್ಯಮಯವಾಗಿ ನುಡಿಸಿ, ಸಹಕರಿಸಿದರು.
ಇದೇ ಸಂದರ್ಭದಲ್ಲಿ ಭಾವಪೂರ್ವವಾದ ಕೃತಿಯೊಂದನ್ನು ಸ್ವತಃ ಸಂಯೋಜಿಸಿದ ಗಾಯಕಿ ರೇಖಾ ಹೆಗಡೆ ಕಂಪ್ಲಿ ಹಾಡಿ ಸಭೆಯನ್ನು ವಂದಿಸಿದರು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ, ಪರಿಚಯದೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top