Slide
Slide
Slide
previous arrow
next arrow

TSS ಮಾಜಿ‌ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯನ ಬೆಂಬಲಿಗನಿಂದ ಸದಸ್ಯನ ಮೇಲೆ ಹಲ್ಲೆ..! ವಿಡಿಯೋ ವೈರಲ್

300x250 AD

ಶಿರಸಿ: ಪ್ರತಿಷ್ಠಿತ ಟಿಎಸ್ಎಸ್ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದ ನ್ಯಾಯಾಲಯದ ಆದೇಶವನ್ನು ವಿರೋಧಿಸಿ, ಶನಿವಾರ ಹೊಸ ಆಡಳಿತ ಮಂಡಳಿಯ ನಿರ್ದೇಶಕರು ಹಾಗು ಅವರ ಅಭಿಮಾನಿ ಸದಸ್ಯರು ಸಂಘದ ಪ್ರಧಾನ ಕಚೇರಿ ಬಾಗಿಲಿನಲ್ಲಿ ನಿಂತು ಆಕ್ರೋಷ ವ್ಯಕ್ತಪಡಿಸಿದ್ದರು.

ಈ ವೇಳೆ ತನ್ನ ದಿನನಿತ್ಯದ ಕಾರ್ಯಕ್ಕೆ ಕಛೇರಿ ಒಳಗಡೆ ತೆರಳಲು ಯತ್ನಿಸಿದ ಸದಸ್ಯನನ್ನು, ಟಿಎಸ್ಎಸ್ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯನ ತಂಡದ ಕುಮ್ಮಕ್ಕಿನಿಂದ ಗಣೇಶ ಎಂಬಾತನು, ಸದಸ್ಯನನ್ನು ದೂಡಿ, ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಹಲ್ಲೆಗೊಳಗಾದ ಸದಸ್ಯ ಪೋಲೀಸ್ ಠಾಣೆಗೆ ಹೋಗಿ ದೂರಿನ ಅರ್ಜಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಂಸ್ಥೆಯ ಕಚೇರಿಯ ಬಾಗಿಲಿನಲ್ಲಿ ನಿಂತು ಆಕ್ರೋಷ ವ್ಯಕ್ತಪಡಿಸುತ್ತಿರುವಾಗ, ಸಂಘದ ಸದಸ್ಯ ಕಛೇರಿಯೊಳಗೆ ಹೋಗದಂತೆ ವೈದ್ಯನ ಬೆಂಬಲಿಗರು ಎನ್ನಲಾಗುವ ವ್ಯಕ್ತಿಯೋರ್ವ ಸಂಸ್ಥೆಯ ಸಾಮಾನ್ಯ ಸದಸ್ಯನ ಮೇಲೆ ಹಲ್ಲೆಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೇಳೆ ಉಳಿದ ಸದಸ್ಯರು ಮಧ್ಯಪ್ರವೇಶಿಸಿ ಮುಂದಾಗುತ್ತಿದ್ದ ದುರ್ಘಟನೆಯನ್ನು ತಪ್ಪಿಸಿದ್ದಾರೆ ಎನ್ನಲಾಗಿದೆ.

300x250 AD

ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿ ಸಂಘದ ಸದಸ್ಯರ ಮೇಲೆ ಹಲ್ಲೆ ಮಾಡುವ ಇಂತಹ ದುರ್ಘಟನೆಗಳು ಸಹಕಾರಿ ಕ್ಷೇತ್ರಕ್ಕೆ ಮಾಡುವಂತಹ ಅಪಚಾರವಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Share This
300x250 AD
300x250 AD
300x250 AD
Back to top