ಶಿರಸಿ: ಪ್ರಸ್ತುತ ವರ್ಷ ಎಸ್‌ಎಸ್‌ಎಲ್‌ಸಿ (ಸ್ಟೇಟ್) ಯಲ್ಲಿ ಶೇ.೯೫, ಸಿಬಿಎಸ್‌ಇ ಯಲ್ಲಿ ಶೇ.೯೦ ಹಾಗೂ ದ್ವಿತೀಯ ಪಿಯುಸಿಯಲ್ಲಿ (ಸ್ಟೇಟ್ ಹಾಗೂ ಸಿಬಿಸಿಇ) ಶೇ.೯೦ಕ್ಕೂ ಹೆಚ್ಚು ಅಂಕಗಳಿಸಿದ ನಾಮಧಾರಿ ಸಮಾಜದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಬೆಂಗಳೂರು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ(ರಿ.) ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಪ್ರಟಣೆಯಲ್ಲಿ ತಿಳಿಸಲಾಗಿದೆ.
ಅತೀ ಹೆಚ್ಚು ಅಂಕಗಳನ್ನು ಪಡೆದ ಆಯ್ದ ಮತ್ತು ನಿರ್ದಿಷ್ಟ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಅರ್ಜಿಯ ಜೊತೆಯಲ್ಲಿ ದೃಢೀಕರಿಸಿದ ಅಂಕಪಟ್ಟಿ, ಜಾತಿ ಮತ್ತು ವರಮಾನ ಪತ್ರದೊಂದಿಗೆ ವಿದ್ಯಾರ್ಥಿಯ ಪೂರ್ಣ ವಿಳಾಸ ಮತ್ತು ಮೋಬೈಲ್ ನಂಬರ್ ಮಾಹಿತಿಯನ್ನು ಜೂನ್ ೩೦, ೨೦೨೪, ರ ಒಳಗೆ- ಆರ್ ಎಲ್ ನಾಯಕ, # ೨೩, ೩ನೇ ಬ್ಲಾಕ್, ಬಿಡಿಎ ಕಾಂಪ್ಲೆಕ್ಸ ಹಿಂದುಗಡೆ, ನಾಮಧಾರಿ ಭವನ ಹತ್ತಿರ, ನಾಗರಭಾವಿ, ೨ ನೇ ಹಂತ, ಬೆಂಗಳೂರು-೫೬೦೦೭೨ ವಿಳಾಸಕ್ಕೆ ತಲುಪಿಸಲು ಸಂಘದ ಅಧ್ಯಕ್ಷ ಜಿ.ಬಿ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಡಾ|| ಮೋಹನ್‌ದಾಸ್ ಕೆ.ಎನ್,(ಮೋ:Tel:+919900158367) ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.