Slide
Slide
Slide
previous arrow
next arrow

ಜನತಾ ವಿದ್ಯಾಲಯದಲ್ಲಿ ಗುರುವಂದನಾ ಕಾರ್ಯಕ್ರಮ ಯಶಸ್ವಿ

300x250 AD

ದಾಂಡೇಲಿ : ನಗರದ ಜನತಾ ವಿದ್ಯಾಲಯದ 1992- 93ನೇ ಸಾಲಿನ 10ನೇ ‘ಎಫ್’ ತರಗತಿಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮವನ್ನು ಜನತಾ ವಿದ್ಯಾಲಯದ ರಾಮರೆಡ್ಡಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಜನತಾ ವಿದ್ಯಾಲಯ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಸರಸ್ವತಿ ನಾಯ್ಕ ಉದ್ಘಾಟಿಸಿ ಮಾತನಾಡುತ್ತಾ ಕಲಿತ ವಿದ್ಯಾರ್ಥಿಗಳು ಕಲಿತ ವಿದ್ಯೆ ಮತ್ತು ಕಲಿಸಿದ ಗುರುಗಳನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮ ನಡೆಯಲು ಸಾಧ್ಯ. ಕಲಿಸಿದ ಗುರುಗಳಿಗೆ ಇದಕ್ಕಿಂತ ದೊಡ್ಡ ಸಂಭ್ರಮ ಸಂತಸ ಇನ್ನೊಂದಿಲ್ಲ. ಈ ಕಾರ್ಯಕ್ರಮ ನಿವೃತ್ತ ನಮ್ಮಂತ ಶಿಕ್ಷಕರ ಆಯಸ್ಸನ್ನು ವರ್ಧಿಸುವ ಕಾರ್ಯಕ್ರಮವಾಗಿ ರೂಪುಗೊಂಡಿದೆ ಎಂದರು.

ಇನ್ನೋರ್ವ ನಿವೃತ್ತ ಮುಖ್ಯೋಪಾಧ್ಯಾಯನಿ ರಂಜನಾ ಭಾನಾವಳಿಕರ್ ಮಾತನಾಡಿ ಒಂದೇ ಕುಟುಂಬದ ಸದಸ್ಯರು ಸೇರಲು ತುಂಬಾ ಕಷ್ಟದ ಸಮಯದಲ್ಲಿ ತಾವೆಲ್ಲ ಇಷ್ಟೊಂದು ಸಂಖ್ಯೆಯಲ್ಲಿ ಬೇರೆ-ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದ ಬಂದು ಅತ್ಯಂತ ಮುತುವರ್ಜಿ ವಹಿಸಿ ಈ ಒಂದು ಗುರುವಂದನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿ ನಮಗೆಲ್ಲ ಸನ್ಮಾನಿಸಿರುವುದು ನಮಗೆ ಹಬ್ಬದ ರೂಪದಲ್ಲಿ ಕಂಡು ಬಂದಿದೆ ಎಂದರು.

ನಿವೃತ್ತ ದೈಹಿಕ ಶಿಕ್ಷಕರಾದ ಕೆ.ಎಮ್. ಗೌಡ ಹಾಗೂ ಬಿ.ಪಿ. ನಾಯ್ಕ್ ಸಂದರ್ಭೋಚಿತವಾಗಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತಿಯನ್ನು ಸಾಧಿಸಿದಾಗ ಕಲಿಸಿದ ಗುರುಗಳಿಗೆ ಆಗುವ ಖುಷಿ‌ ಮತ್ತೊಂದಿಲ್ಲ. ಹಳೆ ವಿದ್ಯಾರ್ಥಿಗಳು ಸೇರಿ ನಮ್ಮನ್ನೆಲ್ಲ ಒಟ್ಟು ಸೇರಿಸುವ ಮೂಲಕ ಒಂದು ಅಪೂರ್ವ ಕಾರ್ಯಕ್ರಮವನ್ನು ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.

ಜೆವಿಡಿ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಕಿಶೋರ್ ಕಿಂದಾಳ್ಕರ್ ಹಾಗೂ ಜೆವಿಡಿ ಕನ್ನಡ ಮಾಧ್ಯಮ‌ ಹಿ.ಪ್ರಾ ಶಾಲೆಯ ಮುಖ್ಯೋಪಾಧ್ಯಾಯನಿ ನಂದಿನಿ ನಾಯ್ಕ ಮಾತನಾಡಿ ಹಳೆ ವಿದ್ಯಾರ್ಥಿಗಳ ಈ ಕಾರ್ಯಕ್ರಮ ಸ್ಮರಣೀಯ ಕಾರ್ಯಕ್ರಮವಾಗಿದೆ.‌ ಎಲ್ಲರನ್ನೂ ಒಟ್ಟುಗೂಡಿಸಿ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವ ಕಾರ್ಯಕ್ರಮವಾಗಿ ಈ ಕಾರ್ಯಕ್ರಮ ಮೂಡಿಬಂದಿದೆ ಎಂದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜೆವಿಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ.ಅರವಳ್ಳಿ ಹಳೆ ವಿದ್ಯಾರ್ಥಿಗಳ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಇದೊಂದು ಅಪರೂಪದ ಅಪೂರ್ವ ಮಾದರಿ ಕಾರ್ಯಕ್ರಮ ಎಂದರು.

ವಿದ್ಯಾರ್ಥಿ ಪ್ರತಿನಿಧಿಯಾದ ಜ್ಯೋತಿ ನಾಯಕ್ ಮಾತನಾಡುತ್ತಾ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡು, ಈ ಶಾಲೆಯ ಗುರುಗಳು ನಮ್ಮ ಜೀವನದ ಉನ್ನತಿಯ ಮಾರ್ಗದರ್ಶಕರು ಎಂದರು. ಗುರುಗಳಲ್ಲಿ ದೇವರನ್ನು ಕಾಣುವ ಸಂಸ್ಕಾರ ನಮ್ಮದು. ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯುವಂತಾಗಬೇಕೆಂದು ಹೇಳಿ ನಮ್ಮ ಕರೆಗೆ ಪ್ರೀತಿಯಿಂದ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟ ಎಲ್ಲಾ ಶಿಕ್ಷಕ ವೃಂದದವರಿಗೆ‌ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಋಣಿಯಾಗಿದ್ದೇವೆ ಎಂದರು.

ನಿವೃತ್ತ ಶಿಕ್ಷಕರನ್ನು ಹಾಗೂ ಇನ್ನಿತರ ಶಿಕ್ಷಕರನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಶೈನಾಜ ಶೇಖ ಪ್ರಾರ್ಥನೆ ಗೀತೆ ಹಾಡಿದರು. ವೀಣಾ ಗುನೆ ಸ್ವಾಗತಿದಿದರು. ಚಿತ್ರಾ.ಟಿ.ದೇವರಾಜ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮಿ ಕಲ್ಲಗುಡಿ ಅವರು ಶಿಕ್ಷಕರನ್ನು ಪರಿಚಯಿಸಿದರು. ರಾಜಾರಾವ್ ದಾಸರಿ ವಂದಿಸಿದರು ಗುರುಮಠಪತಿಯವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
1992- 93ನೇ ಸಾಲಿನ 10ನೇ ಎಫ್ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top