ಭಟ್ಕಳ: ಕುಟುಂಬದ ಆಸರೆಯಾಗಿದ್ದ ವ್ಯಕ್ತಿಯೊರ್ವ ಅನಾರೋಗ್ಯಕ್ಕೆ ತುತ್ತಾಗಿ ಆಕಸ್ಮಿಕವಾಗಿ ಮರಣ ಹೊಂದಿದ್ದು, ಅವರ ಮನೆಗೆ ಸಚಿವ ಮಂಕಾಳ ವೈದ್ಯರ ಪುತ್ರಿ ಬೀನಾ ವೈದ್ಯ ತೆರಳಿ ಸಾಂತ್ವಾನ ಹೇಳಿ ಧನ ಸಹಾಯ ಮಾಡಿದ್ದಾರೆ.
ತಾಲೂಕಿನ ಬೈಲೂರಿನ ವಸಂತ ದೇವಡಿಗ ಅನಾರೋಗಕ್ಕೆ ತುತ್ತಾಗಿ ಆಕಸ್ಮಿಕವಾಗಿ ಮರಣ ಹೊಂದಿದ್ದರು. ಮನೆಯಲ್ಲಿ ಪತ್ನಿ ಮತ್ತು ಎರಡು ಮಕ್ಕಳು ಅನಾಥರಾಗಿದ್ದರು. ಎರಡು ಮಕ್ಕಳ ವಿದ್ಯಾಭ್ಯಾಸ ಕುಟುಂಬಕ್ಕೆ ಆಸರೆ ಇಲ್ಲದೆ ಸಂಕಷ್ಟ ಅನುಭವಿಸುತಿತ್ತು. ವಿಷಯ ತಿಳಿದ ಅಲ್ಲಿನ ಅಲ್ಲಿನ ಕಾರ್ಯಕರ್ತರು ಸಚಿವ ಮಂಕಾಳ ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಮಗಳು ಬೀನಾ ವೈದ್ಯರನ್ನು ಅವರ ಮನೆಗೆ ಕಳುಹಿಸಿ ಕುಟುಂಬಕ್ಕೆ ನೆರವಾಗಿ ಸಾಂತ್ವನ ಹೇಳಿ ಸಹಾಯವನ್ನು ಮಾಡಿದ್ದಾರೆ.
ಕುಟುಂಬದ ಸ್ಥಿತಿ ಅರಿತ ಬೀನಾ ವೈದ್ಯ ಇಬ್ಬರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಂಡು ಆ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಜಿಲ್ಲೆಯ ಜವಾಬ್ದಾರಿ, ಒತ್ತಡದ ನಡುವೆಯೂ ಜನಸಾಮಾನ್ಯರು ಸಂಕಷ್ಟದ ಸ್ಥಿತಿಯಲ್ಲಿ ಇದ್ದಾರೆ ಎಂದ ಕೂಡಲೆ ಪುತ್ರಿಯನ್ನು ಕಳುಹಿಸಿ ಸಹಾಯ ಹಸ್ತ ಚಾಚಿದ ಸಚಿವರ ನಡೆಗೆ ಎಲ್ಲಡೆ ಪ್ರಶಂಶೆ ವ್ಯಕ್ತವಾಗಿದೆ.