Slide
Slide
Slide
previous arrow
next arrow

ಹಗ್ಗ ತುಂಡಾಗಿ ಮಗುಚಿದ ತೂಗುಸೇತುವೆ: ಅದೃಷ್ಟವಶಾತ್ ತಾಯಿ-ಮಗು ಪಾರು

300x250 AD

ಹೊನ್ನಾವರ: ತಾಲೂಕಿನ ಕೋಡಾಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಅನಿಲಗೋಡದಿಂದ ಹೆಗ್ಗಾರ -ಬಳ್ಕೂರ ಸಂಪರ್ಕ ಕಲ್ಪಿಸುವ ತೂಗು ಸೇತುವೆಯ ರೋಪ್ ತುಂಡಾಗಿ ಸೇತುವೆ ಒರೆಯಾಗಿ ಸಂಪರ್ಕ ಕಡಿತಗೊಂಡಿದೆ.

ಅನೀಲಗೋಡದಿಂದ ಬಳ್ಕೂರಗೆ ಸಂಪರ್ಕ ಕಲ್ಪಿಸುವ ಹೆಗ್ಗಾರ ಸಮೀಪದ ತೂಗು ಸೇತುವೆಯಲ್ಲಿ ಪ್ರತಿನಿತ್ಯ ನೂರಾರು ಸಂಖ್ಯೆಯ ಸಾರ್ವಜನಿಕರು ಈ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದರು.

ಶುಕ್ರವಾರ ಬೆಳಿಗ್ಗೆ ೯ ಗಂಟೆಯ ಸುಮಾರಿಗೆ ತಾಯಿ ಮಗು ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ತೂಗುಸೇತುವೆಯ ಹಗ್ಗ ಕಟ್ಟಾಗಿ ತೂಗುಸೇತುವೆ ಒರೆಯಾಗಿ ಪಲ್ಟಿ ಹೊಡೆದಂತಾಗಿದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

300x250 AD

ಪ್ರತಿ ನಿತ್ಯ ವಿದ್ಯಾರ್ಥಿಗಳು ಸಾರ್ವಜನಿಕರು ಹೆಚ್ಚಿನ ಸಂಖೆಯಲ್ಲಿ ಹೆಗ್ಗಾರ ಮೂಲಕ ಸಂಚರಿಸುತ್ತಿದ್ದರು. ಶಾಲಾ ರಜಾ ಇರುವ ಹಿನ್ನಲೆಯಲ್ಲಿ ಒಡಾಟಗಳು ಕಡಿಮೆ ಇರುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಎನ್ನಲಾಗಿದೆ. ಈ ಸೇತುವೆ ಮುರಿದಿರುವ ಹಿನ್ನಲೆಯಲ್ಲಿ ಸಂಪರ್ಕ ಕಡಿತಗೊಂಡಿದ್ದು ಸಾರ್ವಜನಿಕರು ಸುಮಾರು ೫ ಕೀಲೋಮೀಟರ ಸುತ್ತಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಳ್ಕೂರು ಗ್ರಾಮ ಪಂಚಾಯತ ಸದಸ್ಯ ಗಣಪತಿ ನಾಯ್ಕ್ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು, ಮತ್ತು ಕೋಡಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಪ್ಪ ನಾಯ್ಕ ಅಧಿಕಾರಿಗಳ ಜೊತೆ ಸ್ಥಳದಲ್ಲಿ ಉಪಸ್ಥಿತರಿದ್ದು ಪರ್ಯಾಯ ವ್ಯವಸ್ಥೆಯ ಕುರಿತು ಚರ್ಚಿಸಿದರು.

Share This
300x250 AD
300x250 AD
300x250 AD
Back to top