ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಸಂಸ್ಥೆಯ ವಿಶ್ವದರ್ಶನ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಎಚ್.ಎಸ್. ಸಂದೇಶ್ ದ್ವಿತೀಯ ಪಿಯುಸಿ ಪರೀಕ್ಷೆ-2ರಲ್ಲಿ ಮೊದಲ ಪರೀಕ್ಷೆಗಿಂತ 5 ಅಂಕ ಹೆಚ್ಚಿಸಿಕೊಳ್ಳುವುದರೊಂದಿಗೆ ರಾಜ್ಯಕ್ಕೆ 9ನೇ ಸ್ಥಾನಕ್ಕೆ ಭಡ್ತಿ ಹೊಂದಿದ್ದಾನೆ. ಮೊದಲ ಪರೀಕ್ಷೆಯಲ್ಲಿ 585 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದ ವಿದ್ಯಾರ್ಥಿ ದ್ವಿತೀಯ ಪಿಯುಸಿ ಪರೀಕ್ಷೆ-2ರಲ್ಲಿ ಮತ್ತೆ ಪರೇಕ್ಷೆ ಬರೆದಿದ್ದು, 5 ಅಂಕ ಹೆಚ್ಚಾಗಿ 590 ಅಂಕ ಪಡೆಯುವದರೊಂದಿಗೆ ತಾಲೂಕಿಗೆ ದ್ವಿತೀಯ, ಜಿಲ್ಲೆಗೆ 6ನೇ ಹಾಗೂ ರಾಜ್ಯಕ್ಕೆ 9 ನೆಯ ಸ್ಥಾನ ಪಡೆದಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು,ವ್ಯವಸ್ಥಾಪಕರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಸಂತಸ ವ್ಯಕ್ತಪಡಿಸಿದ್ದಾರೆ.