Slide
Slide
Slide
previous arrow
next arrow

ಜೋಯಿಡಾದ ಎಲ್ಲರ ಮೆಚ್ಚಿನ ನಿವೃತ್ತಿ ಘೋಡ್ಕೆ ವಿಧಿವಶ

300x250 AD

ಜೋಯಿಡಾ: ತಾಲೂಕಿನ ಜನಪ್ರಿಯ ಅನೌನ್ಸರ್, ಮೀನು ವ್ಯಾಪಾರಿ ಮತ್ತು ಸಾಮಾಜಿಕ, ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯರಾಗಿ ಗುರುತಿಸಿಕೊಂಡಿದ್ದ ಎಲ್ಲರ ಮೆಚ್ಚಿನ ನಿವೃತ್ತಿ ಘೋಡ್ಕೆ ಬುಧವಾರ ತಡರಾತ್ರಿ ಹೃದಯಾಘಾತಕ್ಕೊಳಗಾಗಿ ವಿಧಿವಶರಾದರು. ಮೃತರಿಗೆ 57 ವರ್ಷ ವಯಸ್ಸಾಗಿತ್ತು.

ಸರಳ, ಸಜ್ಜಿನಿಕೆಯ ವ್ಯಕ್ತಿತ್ವದವರಾಗಿದ್ದ ನಿವೃತ್ತಿ ಘೋಡ್ಕೆಯವರು ಸಾಮಾಜಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳ ಬಗ್ಗೆ ಪ್ರಚಾರದ ಅನೌನ್ಸ್ ಮಾಡುವುದರಲ್ಲಿ ಎತ್ತಿದ ಕೈ ಆಗಿದ್ದರು.

300x250 AD

ಮೃತರು ಪತ್ನಿ, ಇಬ್ಬರು ಗಂಡು‌ ಮಕ್ಕಳು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ‌ ನಿಧನಕ್ಕೆ ತಾಲೂಕಿನ ಗಣ್ಯರನೇಕರು ಕಂಬನಿ‌ ಮಿಡಿದು ಸಂತಾಪ ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top