Slide
Slide
Slide
previous arrow
next arrow

ಪ್ರೀತಮ್ ಸಾವಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಬೃಹತ್ ಮೆರವಣಿಗೆ; ಮನವಿ ಸಲ್ಲಿಕೆ

300x250 AD

ಶಿರಸಿ: ಶಿರಸಿಯಲ್ಲಿ ಇತ್ತಿಚೆಗೆ ನಡೆದ ಉದ್ಯಮಿಪ್ರೀತಮ್ ಪ್ರಕಾಶ ಪಾಲನಕರ ಆತ್ಮ ಹತ್ಯೆ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವ ಮೂಲಕ ಸಮಾಜದಲ್ಲಿ ಹಂತಕರಿಂದ ನಡೆಯುವ ಅಹಿತಕರ ಘಟನೆಯನ್ನು ತಡೆಯಬೇಕೆಂದು ಅಗ್ರಹಿಸಿ ದೈವಜ್ಷ ಬ್ರಾಹ್ಮಣ ಸಮಾಜ ಮತ್ತು ದೈವಜ್ಷ ಬ್ರಾಹ್ಮಣ ಸರಾಫರ ಹಾಗು ಆಭರಣ ತಯಾರಕರ ಸಂಘದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ನೀಡಲಾಯಿತು.

ನಗರದ ಸಿಂಪಿಗಲ್ಲಿಯ ವಿಠೋಭಾ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಹಳೆಬಸ್ ನಿಲ್ದಾಣ, ಸಿ.ಪಿ.ಬಝಾರ್,ಝೂ ಸರ್ಕಲ್ ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ತೆರಳಿತು. ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯ ದೈವಜ್ಷ ಬ್ರಾಹ್ಮಣ ಸಮಾಜದವರು ಪಾಲ್ಗೊಂಡು ಮೆರವಣಿಗೆಯುದ್ದಕ್ಕೂ ನ್ಯಾಯಕ್ಕಾಗಿ ಘೋಷಣೆ ಕೂಗಿದರು. ಪೋಲಿಸರು ಬ್ಲ್ಯಾಕಮೇಲರ್ ಗಳನ್ನು ಬಂಧಿಸಿ ಸಮಾಜ ಕಾಪಾಡಬೇಕೆನ್ನುವ ಸ್ಲೋಗನ್ ಕೇಳಿ ಬಂದಿತು.

ದೈವಜ್ಞ ಸಮಾಜದ ಸದಸ್ಯ ಹಾಗೂ ಕಾಮಧೇನು ಜ್ಯುವೇಲರಿ ವರ್ಕ್ಸ್ ಶಿರಸಿ ಇದರ ಮಾಲೀಕರ ಮಗನಾದ ಪ್ರೀತಮ್ ಪ್ರಕಾಶ ಪಾಲನಕರ ಈತನು ನೇಣಿಗೆ ಶರಣಾಗಿ ಮೃತನಾಗಿದ್ದಾನೆ. ಪ್ರೀತಮ್ ಈತನು ಪ್ರತಿಭಾನ್ವಿತ ವ್ಯಕ್ತಿಯಾಗಿದ್ದು, ತನ್ನ ವ್ಯಾಪಾರ ಮತ್ತು ವ್ಯವಹಾರದಿಂದ ಸಮಾಜದಲ್ಲಿ ಉತ್ತಮ ಬಾಂಧವ್ಯ ಮತ್ತು ಸ್ಥಾನಮಾನವನ್ನು ಹೊಂದಿದವನಾಗಿದ್ದು, ತಮ್ಮ ಬಂಗಾರದ ವ್ಯಾಪಾರದ ಜೊತೆಯಲ್ಲಿ ಹತ್ತು ಹಲವು ಉದ್ಯೋಗವನ್ನು ಮಾಡುತ್ತಾ ಉತ್ತಮ ಸ್ಥಿತಿವಂತನಾಗಿದ್ದನು. ಈತನು ಕಳೆದ
ಎರಡು ವರ್ಷಗಳ ಹಿಂದೆಯಷ್ಟೆ ವಿವಾಹ ಆಗಿದ್ದು, ಈತನಿಗೆ ಒಂದೂವರೆ ತಿಂಗಳ ಒಬ್ಬ ಮಗಳಿದ್ದು, ಈತನು ತನ್ನ ಕುಟುಂಬದ ಜೊತೆಯಲ್ಲಿ ಸುಖ ಸಂಸಾರ ನಡೆಸುತ್ತಾ ಬಂದಿದ್ದು, ಈತನಿಗೆ ತಮ್ಮ ಜೀವನ ನಡೆಸಲು ಯಾವುದೇ ತೊಂದರೆ ತಾಪತ್ರಯಗಳು ಇರಲಿಲ್ಲ. ಹೀಗಿದ್ದಾಗ್ಯೂ ಪ್ರೀತಮ್‌ ಪ್ರಕಾಶ ಪಾಲನಕರ ಈತನು ನೇಣಿಗೆ ಶರಣಾಗಿರುವುದು ನಮ್ಮ ಸಮಾಜದಲ್ಲಿ ಮತ್ತು ಸಾರ್ವಜನಿಕರಲ್ಲಿ ಅನೇಕ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈತನ ಸಾವು ಬ್ಲಾಕ್ ಮೇಲ್ ನಿಂದಾಗಿರಬಹುದು
ಎಂಬ ಸಂಶಯ ಸಮಾಜದಲ್ಲಿ ಮತ್ತು ಸಾರ್ವಜನಿಕರಲ್ಲಿ ಉಂಟಾಗುತ್ತಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿರುತ್ತದೆ. ಆದ್ದರಿಂದ ಪ್ರೀತಮ್ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸುವ ಮೂಲಕ ಅಂತಕರಿಂದ ನಡೆಯುವ ಅಹಿತಕರ ಘಟನೆಯನ್ನು ತಪ್ಪಿಸುವುದರ ಜೊತೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸಮಾಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

300x250 AD

ಸಹಾಯಕ ಆಯುಕ್ತರಾದ ಅಪರ್ಣಾ ರಮೇಶ ಮನವಿ ಸ್ವೀಕರಿಸಿದರು. ಮನವಿ ನೀಡುವ ಸಂದರ್ಭದಲ್ಲಿ ದೈವಜ್ಷ ಬ್ರಾಹ್ಮಣ ಸಮಾಜದ ಮಂಜುನಾಥ ಶೇಟ್ ಕಾಯಿಗುಡ್ಡೆ, ಸಂಧ್ಯಾ ಕುರ್ಡೆಕರ್, ವಿನೋದ ಶೇಟ್, ಪ್ರದೀಪ ಎಲ್ಲಂಕರ್, ಸಂತೋಷ ರೇವಣಕರ್, ನಾಗರಾಜ ಶೇಟ್, ವಿನೋದ ಬನವಾಸಿ, ಉದಯ ಶೇಟ್ ಬಣಗಿ ಇತರರಿದ್ದರು.

Share This
300x250 AD
300x250 AD
300x250 AD
Back to top