Slide
Slide
Slide
previous arrow
next arrow

ಶಿಕ್ಷಣದ ಉದ್ದೇಶ ಪರದೇಶವಲ್ಲ; ಶಿಕ್ಷಿತರು ಕೃಷಿಗೆ ಮರಳಲಿ; ಸ್ವರ್ಣವಲ್ಲೀ ಶ್ರೀ

300x250 AD

ಸ್ವರ್ಣವಲ್ಲೀಯಲ್ಲಿ ಕೃಷಿ ಜಯಂತಿ, ನೃಸಿಂಹ ಜಯಂತಿ ಸಮಾರೋಪ | ಕೃಷಿ ಬದುಕಿನ ಮೂಲಾಧಾರ

ಶಿರಸಿ: ಶಿಕ್ಷಣದ ಮೂಲ ಉದ್ದೇಶ‌ ಪರದೇಶವಲ್ಲ. ಪ್ರತಿಭೆ ಪಲಾಯನ ಒಳ್ಳೆಯ ಬೆಳವಣಿಗೆಯಲ್ಲ. ಕೃಷಿ ಇಟ್ಟುಕೊಂಡೇ‌ ಜೀವನ ಮುಂದುವರಿಸಬೇಕು. ನಮ್ಮ ಸಂಸ್ಕೃತಿ ಇಟ್ಟುಕೊಂಡೇ‌ ಮುಂದೆ ಹೋಗಬೇಕು ಎಂದು ಸೋಂದಾ ಸ್ವರ್ಣವಲ್ಲೀ‌ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿ ‌ನುಡಿದರು.

ಅವರು‌ ತಾಲೂಕಿನ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ ಬುಧವಾರ ಸಮಾರೋಪಗೊಂಡ ಕೃಷಿ ಜಯಂತಿಯಲ್ಲಿ ಸಾನ್ನಿಧ್ಯ‌ ನೀಡಿ ಆಶೀರ್ವಚನ‌ ನುಡಿದರು. ಭಗವಂತನ ನೃಸಿಂಹ ಅವತಾರವು ಮನುಷ್ಯನ ಬದುಕಿಗೆ ಪಾಠವಾಗಿದೆ. ನೃಸಿಂಹ ಆತ‌ ನರ‌ -ಸಿಂಹ. ಕೆಳಗೆ‌ ನರ, ಮೇಲೆ‌ ಸಿಂಹ. ಕೆಳಮಟ್ಟದಲ್ಲಿ ಇದ್ದಾಗ ಸಾಮಾನ್ಯ‌ ಮನುಷ್ಯ. ಮೇಲ್ಮಟ್ಟಕ್ಕೆ ಏರಿದರೆ ಸಿಂಹನಾಗುತ್ತಾನೆ. ಭಗವಂತನ ಅವತಾರದ ಸಂಕೇತ‌ ಎಂದು ಓರ್ವ ಭಕ್ತನನ್ನು ಕಾಪಾಡಲು ದೇವರೇ ಧರೆಗಿಳಿದ ಅವತಾರ ನೃಸಿಂಹ ಅವತಾರವಾಗಿದೆ. ನೃಸಿಂಹ ಅವತಾರ ಪ್ರಾಣಿ‌ ಮನುಷ್ಯ ಸೇರಿದ ಅವತಾರ. ಅದಕ್ಕಿಂತ ಹಿಂದಿನ ಅವತಾರಗಳು ಹಿಂದೆ ಪ್ರಾಣಿ ರೂಪದ ಅವತಾರವಾಗಿದೆ.‌ ಮುಂದೆ ಮನುಷ್ಯ ರೂಪದ ಅವತಾರಗಳಾಗಿವೆ. ಮನುಷ್ಯನ ಬೆಳವಣಿಗೆಯ ಸಂಕೇತವೂ ಹೌದು‌ ಎಂದರು. ನಮ್ಮ ಕೆಳಗಿರುವದು ಮೂಲಾಧಾರ. ಮೇಲಿರುವದು ಧ್ಯೆಯ. ನಮಗೆಲ್ಲ ಕೆಳಗೆ ಆಧಾರ ಆಗಿರುವದು ಕೃಷಿ. ಧ್ಯೇಯ ಉಪ‌ ಕಸುಬು. ವ್ಯಾಪಾರ, ಕೈಗಾರಿಕೆ, ವೃತ್ತಿ ಆಗಬೇಕು. ಮೂಲ ಧ್ಯೇಯ ಬಿಡಬಾರದು ಎಂದರು.

ಯುವ ಸಮುದಾಯ ನಗರಕ್ಕೆ ವಲಸೆ ಹೋದರೆ ಸಂಸ್ಕೃತಿ, ಧಾರ್ಮಿಕ ಆಚರಣೆ ಇಲ್ಲವಾಗುತ್ತಿದೆ. ಸಾಮೂಹಿಕ ಆಚರಣೆ ಕೈ ಬಿಡಬಾರದು ಎಂದರು. ಯುವಕರ ಪ್ರವಾಹ ನಗರ ಮುಖಿಯಾಗಿ ಹೋಗುತ್ತಿದೆ. ಇದನ್ನು ತಡೆಯದೇ ಹೋದರೆ ಕೃಷಿ ಜೊತೆಗೆ ಸಹಕಾರಿ ಆಂದೋಲನ‌ ಕೂಡ ದುರ್ಬಲ ಆಗುತ್ತದೆ‌. ವಿಧ್ಯಾಭ್ಯಾಸ ಮಾಡಿದವರು‌ ಕೃಷಿಗೆ ಬಂದರೆ ಇನ್ನಷ್ಟು ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.

ನಮ್ಮ ಬದುಕಿನ ಮೂಲಾಧಾರವಾದ ಕೃಷಿ ಬಿಟ್ಟು ಸಾಧನೆ‌‌ ಮಾಡಬಾರದು. ಯಾವುದೇ ಶಿಕ್ಷಣ ಪಡೆದವರೂ ಕೃಷಿಗೆ ವಾಪಸ್ ಬರಬಹುದು. ಇದನ್ನು ಯುವಕರು ಹೆಚ್ಚು ಅರ್ಥ ಮಾಡಿಕೊಳ್ಳಬೇಕು ಎಂದರು. ಕಿರಿಯ ಯತಿಗಳಾದ ಶ್ರೀ ಆನಂದ‌ಬೋಧೇಂದ್ರ ಸರಸ್ವತೀ‌ಮಹಾ ಸ್ವಾಮೀಜಿಗಳು ಆರ್ಶೀವಚನ‌‌ ನುಡಿದು, ನಮಗೆ ದೇವರಲ್ಲಿ ನಿಜವಾದ ಭಕ್ತಿ ಇದ್ದರೆ ದೇವರು‌ ಒಲಿಯುತ್ತಾನೆ‌ ಎಂಬುದಕ್ಕೆ ನೃಸಿಂಹನೇ ಸಾಕ್ಷಿ. ಭಕ್ತರಲ್ಲಿ‌ ನಾಲ್ಕು ವಿಧವಾಗಿದೆ. ಜ್ಞಾನಿ ಭಕ್ತ ತನ್ನ ಎಲ್ಲ ಕೆಲಸವನ್ನು ಭಗವಂತನಿಗೋಸ್ಕರ ಮಾಡುತ್ತಾರೆ. ಪ್ರಹ್ಲಾದ ಕೂಡ ನಿಷ್ಕಾಮ ಭಕ್ತ. ಅವನ ಒಂದೇ‌ ಒಂದು‌‌ ಕೋರಿಕೆಗೆ ಅವತರಿಸಿದನು ಭಗವಂತ ಎಂದರು. ನಮ್ಮಲ್ಲೂ ಕಾಮ-ಕ್ರೋಧ-ಮದ‌-ಮತ್ಸರಗಳೆಂಬ ಹಿರಣ್ಯ ಕಶ್ಯಪು ಇದ್ದಾನೆ. ಪ್ರಹ್ಲಾದನ ಭಕ್ತಿ‌ ಎಲ್ಲರಲ್ಲೂ ಇರಲಿ. ಜ್ಷಾನ ಎಂಬ ನರಸಿಂಹನ‌ ಮೂಲಕ ಹಿರಣ್ಯಕಶ್ಯಪು ಎಂಬ ಅಜ್ಞಾನದ ನಾಶವಾಗಲಿ ಎಂದೂ ಆಶೀರ್ವದಿಸಿದರು.

300x250 AD

ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಕೃಷಿ ಗ್ರಾಮ ಯೋಜನೆಯ‌ ಮೂಲಕ ವಯಸ್ಸಾದ ರೈತ ಕುಟುಂಬದ ಭೂಮಿ‌ ಉಳುಮೆಗೆ ಟಿಎಸ್ಎಸ್ ನೆರವಾಗಲಿದೆ‌ ಎಂದ ಅವರು ಸಹಕಾರಿಯಲ್ಲಿ‌ ಕಳಂಕಿತರನ್ನು ಸರಿದಾರಿಗೆ ತರಬೇಕಾಗಿದೆ ಎಂದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಕಾರ್ಯದರ್ಶಿ ಜಿ.ವಿ.ಹೆಗಡೆ ಗೊಡವೆಮನೆ, ಪ್ರತಿಷ್ಠಾನದ ಅಧ್ಯಕ್ಷ ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ಕಾರ್ಯದರ್ಶಿ ಸುರೇಶ ಹಕ್ಕಿಮನೆ ಇತರರು‌ ಇದ್ದರು.


ಕೃಷಿ ಉಳಿದರೆ ಮಾತ್ರ ಧಾರ್ಮಿಕತೆ ಉಳಿಯುತ್ತದೆ. ಮಾನವನ ಬದುಕಿನ ಧರ್ಮ ಸಾಧನೆಗೆ‌ ಈ ಶರೀರ ಅತ್ಯಂತ ಅವಶ್ಯಕವಾಗಿದೆ. ಆಹಾರ ಧಾನ್ಯದಿಂದ‌ ಬರುತ್ತದೆ. ಧಾನ್ಯ ಕೃಷಿಯಿಂದ ಬರುತ್ತದೆ. ನಾವೂ ಕೃಷಿಯನ್ನು ಮುಂದುವರಿಸುತ್ತೇವೆ.– ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ, ಕಿರಿಯ ಸ್ವಾಮೀಜಿ, ಶ್ರೀಸ್ವರ್ಣವಲ್ಲೀ

ಕೃಷಿ ಜಯಂತಿ ಇದು ಭಕ್ತರ ಕಾರ್ಯಕ್ರಮ. ಮುಂದಿನ ಬಾರಿಯಿಂದ ಕೃಷಿ ಜಯಂತಿಗೆ ಪ್ರತಿ‌ಮನೆಯಿಂದ ಇಬ್ಬರಾದರೂ ಕೃಷಿ ಜಯಂತಿಗೆ ಬರಬೇಕು. ಇಲ್ಲಿ ಒಂದಿಷ್ಟು ಪ್ರೇರಣೆ ಕೃಷಿಯ ಪ್ರೇರಣೆ ಮಾಡಬೇಕು.-ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮಿಗಳು

Share This
300x250 AD
300x250 AD
300x250 AD
Back to top