ದಾಂಡೇಲಿ: ಆಂದ್ರ ಪ್ರದೇಶ ರಾಜ್ಯದ ದೈವಸೇವಕರಾದ ಪಾಸ್ಟರ್ ಸಂಜೊಯ್ ಆರ್.ಎಮ್ ಮತ್ತು ಪಾಸ್ಟರ್ ಪ್ರಭುದಾಸ ಹಾಗೂ ಇನ್ನಿತರ ಎಲ್ಲ ಪಾಸ್ಟರ್‌ಗಳಿಂದ ದಾಂಡೇಲಿ ಪಾಸ್ಟರ್ ಫೆಲೋಶಿಪ್ ಟ್ರಸ್ಟ್(ರಿ) ದಾಂಡೇಲಿಯ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಉದ್ಘಾಟನೆಗೊಂಡಿತು.
ಪಾಸ್ಟರ್ ಸಂಜೊಯ್ ಆರ್.ಎಮ್ ಅವರು ದೇವರ ವಾಕ್ಯಗಳ ಸಂದೇಶ ನೀಡಿದರು. ನಿರ್ದೇಶಕ ಡಾ. ಕೆ. ಕ್ರಿಷ್ಟಫಾರ್ ಅವರು 1993 ರಿಂದ 2024 ರ ನಡುವಿನ ಪಾಸ್ಟರ್ ಫೆಲೋಶಿಪ್ ಸಾಧನೆಗಳನ್ನು ವಿವರಿಸಿದರು. ಟ್ರಸ್ಟ್ ಅಧ್ಯಕ್ಷ ಜಾರ್ಜ ತಲಪಾಟಿ ಟ್ರಸ್ಟ್ ಉದ್ದೇಶಗಳನ್ನು ವಿವರಿಸಿದರು. ಜಂಟಿ ಕಾರ್ಯದರ್ಶಿ ಪಾಸ್ಟರ್ ಇಲಿಯಾಸ ಕಾಟಿ ಅವರು ದಾಂಡೇಲಿಯ ಎಲ್ಲ ಪಾಸ್ಟರ್‌ಗಳಿಗೆ, ಸುವಾರ್ತಕರಿಗೆ ಮತ್ತು ಕ್ರೈಸ್ತ ಕುಟುಂಬಗಳಿಗೆ ಟ್ರಸ್ಟ್ ವತಿಯಿಂದ ಸೇವೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು. ಕಾರ್ಯದರ್ಶಿ ಪಾಸ್ಟರ್ ಪ್ರಭಾಕರ ಅಸಾದಿ ವಂದಿಸಿದರು. ಅಧ್ಯಕ್ಷ ಪಾಸ್ಟರ್ ಜಾರ್ಜ್ ತಲಪಾಟಿ ಪ್ರಾರ್ಥಿಸಿದರು. ನಿರ್ದೇಶಕ ಡಾ. ಕೆ. ಕ್ರಿಷ್ಟಫಾರ್ ಆಶಿರ್ವಚನ ನಿಡಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಇಮ್ಯಾನುವೆಲ್ ಜೆ. ಖಜಾಂಜಿ ಡಿ. ಜೀವಯ್ಯ, ಜಂಟಿ ಖಜಾಂಜಿ ಪ್ರಭಾಕರ ಟಿ ಮತ್ತು ಪದಾಧಿಕಾರಿಗಳಾದ ಗಜ್ಜಾ ಎಸ್ಕೆಲ್, ಸ್ಟೀಫನ್ ಡಿ.ಜೆ, ಪ್ರಕಾಶ ಎಚ್, ಇಸ್ಸಾಕ್ ಜಲ್ದಿ, ಲಿಂಗಮ್ ಜೆ, ರೋಷಯ್ಯ ಆರ್. ಪೆಥುರು.ಆರ್ ಮತ್ತು ದಿವಾಕರ್ ಟಿ. ಇದ್ದರು.