Slide
Slide
Slide
previous arrow
next arrow

ರಾಮನಗುಳಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳ ಪರದಾಟ

300x250 AD

ಅಂಕೋಲಾ: ತಾಲೂಕಿನ ಸುಂಕಸಾಳ ಗ್ರಾ.ಪಂ ವ್ಯಾಪ್ತಿಯ ರಾಮನಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಹಲವು ದಿನಗಳಿಂದ ವೈದ್ಯರು ಬರದಿರುವುದಕ್ಕೆ ರೋಗಿಗಳು ಪರದಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಬುಧವಾರ ತೀವ್ರ ಅಸ್ವಸ್ಥಗೊಂಡಿದ್ದ ರೋಗಿಯೊಬ್ಬರನ್ನು ಕರೆದುತಂದಿದ್ದ ಸಂಬಂಧಿಕರು ಆಸ್ಪತ್ರೆ ಮುಂಭಾಗ ರೋಗಿಯನ್ನು ಇರಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಈಗಿನ ಆಸ್ಪತ್ರೆ ಪಕ್ಕದಲ್ಲಿ 12 ಕೋಟಿ‌ ವೆಚ್ಚದ ನೂತನ ಆಸ್ಪತ್ರೆ ಕಾಮಗಾರಿ ನಡೆಯುತ್ತಿದೆ. ಈಗಿರುವ ಆಸ್ಪತ್ರೆಗೆ ಸಮರ್ಪಕವಾಗಿ ವೈದ್ಯರ ಲಭ್ಯತೆ ಇಲ್ಲ. ಇನ್ನು ಹೊಸ ಆಸ್ಪತ್ರೆ ನಿರ್ಮಾಣದ ಬಳಿಕ ವೈದ್ಯರ ಲಭ್ಯತರ ಇರುವುದೇ ಎಂದು ನಾರಾಯಣ ಸಿದ್ದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ರೋಗಿಯ ಸಂಬಂಧಿಕರು, ಸ್ಥಳೀಯರಾದ ಕಾಶಿನಾಥ ನಾಯಕ, ಮಂಜುನಾಥ ಸಿದ್ದಿ, ವಿಲ್ಸನ್ ಡಿಕೋಸ್ತಾ ಇದ್ದರು.

300x250 AD
Share This
300x250 AD
300x250 AD
300x250 AD
Back to top