Slide
Slide
Slide
previous arrow
next arrow

ಮೇ.25ಕ್ಕೆ ವೈಶ್ಯ ಕವಿಗೋಷ್ಠಿ

300x250 AD

ಅಂಕೋಲಾ : ಇಲ್ಲಿಯ ಕಾಕರಮಠದ ಶ್ರೀ ವಿಠ್ಠಲ ಸದಾಶಿವ ದೇವಸ್ಥಾನದ ಸಭಾ ಭವನದಲ್ಲಿ ಮೇ.25ರಂದು ಸಂಜೆ 3:30 ಗಂಟೆಗೆ ವೈಶ್ಯ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಈ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು ಹಾಗೂ ಕಸಾಪ ಮಾಜಿ ಅಧ್ಯಕ್ಷರು ಆದ ಮನೋಹರ್ ಗೋವಿಂದ ಮಲ್ಮನೆ ಶಿರಸಿ ವಹಿಸಲಿದ್ದಾರೆ. ಹಾಗೂ ಕಾರ್ಯಕ್ರಮವನ್ನು ಖ್ಯಾತ ಕಥೆಗಾರ್ತಿ ಶ್ರೀಮತಿ ಸುನಂದ ಪ್ರಕಾಶ್ ಕಡಮೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಕವಿಗಳಾದ ಪ್ರಕಾಶ್ ಕಡಮೆ ಅವರು ಆಗಮಿಸಲಿದ್ದಾರೆ.

ಈ ಕವಿಗೋಷ್ಠಿಯಲ್ಲಿ ವೈಶ್ಯ ಸಮಾಜದ ಕವಿಗಳು ತಮ್ಮ ಕವನವನ್ನು ವಾಚಿಸಲಿದ್ದಾರೆ. ಕಾರ್ಯಕ್ರಮವು ವೈಶ್ಯಕವಿಗೋಷ್ಠಿ ಚಾಲನಾ ಸಮಿತಿಯ ಸಂಚಾಲಕರಾದ ರವೀಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಸಮಾಜದ ಬಾಂಧವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘಟಕರಾದ ರವೀಂದ್ರ ಎನ್. ಶೆಟ್ಟಿ ಹಾಗೂ ಕವಿಗೋಷ್ಠಿ ಚಾಲನಾ ಸಮಿತಿಯ ಸದಸ್ಯರಾದ ಮನೋಹರ ಮಲ್ಮನೆ, ಜಗನ್ನಾಥ ಕಡಮೆ, ಗಣೇಶ್ ಎನ್ ಶೆಟ್ಟಿ ,ಪ್ರಶಾಂತ ವಿ ಶೆಟ್ಟಿ ಪೀರು, ವೆಂಕಟೇಶ್ ಕಾಕರಮಠ, ಸುಧಾ ಜಿ ಶೆಟ್ಟಿ ಇವರು ಕೋರಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top