ಕುಮಟಾ: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ ಕ್ಕೆ ಸಂಬಂಧಿಸಿದಂತೆ, ಕುಮಟಾದ ಡಾ.ಬಾಳಿಗಾ ಕಾಲೇಜಿನಲ್ಲಿನ ಮತ ಎಣಿಕಾ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜೂನ್ ೪ ರಂದು ನಡೆಯುವ ಮತ ಎಣಿಕೆ ಕುರಿತಂತೆ ಮತ ಎಣಿಕಾ ಕೊಠಡಿಗಳಲ್ಲಿ ಕೈಗೊಳ್ಳಬೇಕಾದ ಸಿದ್ದತೆಗಳ ಬಗ್ಗೆ ಹಾಗೂ ಮತಯಂತ್ರದ ಭದ್ರತಾ ಕೊಠಡಿಗೆ ನಿಯೋಜಿಸಿರುವ ಭದ್ರತೆ ಬಗ್ಗೆ ಪರಿಶೀಲಿಸಿದರು.