Slide
Slide
Slide
previous arrow
next arrow

ಸಂಘಕ್ಕೆ ಹಾನಿ ಆರೋಪ; ನಾಲ್ವರ ಮೇಲೆ ದೂರು ದಾಖಲು

300x250 AD

ಶಿರಸಿ: ನಗರದ ಟಿಎಸ್‌ಎಸ್‌ಗೆ ಹತ್ತಿರದ ಹಳ್ಳಿಗಳಿಂದ ಕೆಲಸಕ್ಕೆ ಬರುವ ಕಾರ್ಮಿಕರನ್ನು ಕರೆತರಲು ಮತ್ತು ಕಳುಹಿಸಿ ಕೊಡಲು ಬೇಕಾದ ವ್ಯವಸ್ಥೆಗಳ ಬಗ್ಗೆ ತಮಗೆ ಲಾಭವಾಗುವಂತೆ ಹಾಗೂ ಸಂಘಕ್ಕೆ ಹಾನಿಯಾಗುವಂತೆ ಮಾಡಿದ್ದಾರೆ ಎಂದು ನಾಲ್ವರ ವಿರುದ್ಧ ಟಿಎಸ್‌ಎಸ್ ಪ್ರಭಾರಿ ವ್ಯವಸ್ಥಾಪಕ ವಿಜಯಾನಂದ ಭಟ್‌ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಟಿಎಸ್ಎಸ್ ನ ಮಾಜಿ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಮಾಜಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಮಾಜಿ ಉದ್ಯೋಗಿ ಅನಿಲಕುಮಾರ ಮುಷ್ಟಗಿ ಹಾಗೂ ವಿಶಾಲಾ ಅನಿಲಕುಮಾರ ಮುಷ್ಟಗಿ ವಿರುದ್ಧ ಪ್ರಕರಣ ದಾಖಲಾಗಿದೆ.

300x250 AD

ರವೀಶ ಹೆಗಡೆ ಹಾಗೂ ರಾಮಕೃಷ್ಣ ಹೆಗಡೆ ಕಡವೆ ಅವರು ಅಂದಿನ ಟಿಎಸ್ ಎಸ್ ಉದ್ಯೋಗಿ ಅನಿಲ ಕುಮಾರ್ ಮುಷ್ಠಗಿ ಜೊತೆ ಶಾಮೀಲಾಗಿ ತಮಗೆ ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಸಂಘಕ್ಕೆ ಹಾನಿ ಮಾಡಿದ್ದಾರೆ. ಅನಿಲ್ ಕುಮಾರ್ ಮುಷ್ಟಗಿ ಅವರ ಪತ್ನಿ ವಿಶಾಲಾ ಅನಿಲಕುಮಾರ ಮುಷ್ಟಗಿ ಅವರಿಗೆ ಬಡ್ಡಿ ರಹಿತವಾಗಿ ವಾಹನ ಖರೀದಿಸಲು ಧನಸಹಾಯ ಮಾಡಿದ್ದಾರೆ. ಹಾಗೂ ಪೂರ್ವಾನ್ವಯವಾಗುವಂತೆ ವಿಶಾಲಾ ಅನಿಲಕುಮಾರ ಮುಷ್ಠಗಿ ಅವರಿಗೆ ಹೆಚ್ಚಿನ ಬಾಡಿಗೆ ಪಾವತಿ ಮಾಡುವುದರ ಮೂಲಕ 15.10.2011ರಿಂದ 31.3.2021ರ ವರೆಗಿನ ಅವಧಿಯಲ್ಲಿ ಟಿಎಸ್ ಎಸ್ ಸಂಘಕ್ಕೆ 2,83,48,803 ರೂಪಾಯಿ ಹಣವನ್ನು ವಂಚಿಸುವ ಮೂಲಕ ಸಂಘಕ್ಕೆ ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಮಾರುಕಟ್ಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top