Slide
Slide
Slide
previous arrow
next arrow

ಶಿರಸಿ ಜಾತ್ರೆಗೆ ಸರಕಾರದಿಂದ 3.5 ಕೋಟಿ ರೂ.ಅನುದಾನ ಮಂಜೂರಿ; ಪ್ರದೀಪ ಶೆಟ್ಟಿ ಸ್ಪಷ್ಟನೆ

300x250 AD

ಶಿರಸಿ: ಶಿರಸಿ ಜಾತ್ರೆಗೆ ಸರಕಾರದಿಂದ 3.5 ಕೋಟಿ ಅನುದಾನ ಮಂಜೂರಿಯಾಗಿದ್ದು, ಸರಕಾರದ ಹಲವು ಪ್ರಕ್ರಿಯೆ ಬಳಿಕವಷ್ಟೇ ಹಣ ಬಿಡುಗಡೆಯಾಗಲಿದೆ ಎಂದು ಶಿರಸಿ ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಸ್ಪಷ್ಟಪಡಿಸಿದರು.

ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಸರಕಾರದಿಂದ ಜಾತ್ರೆಗೆ ಅನುದಾನವೇ ಮಂಜೂರಿಯಾಗಿಲ್ಲ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ಹಿತೇಂದ್ರ ನಾಯ್ಕ ಮಾತು ಸತ್ಯಕ್ಕೆ ದೂರವಾಗಿದೆ. ಮಂಜೂರಿಯಾದ ಅನುದಾನದ ಕುರಿತು ಸರಿಯಾಗಿ ಮಾಹಿತಿ ತಿಳಿದು ಅವರು ಜವಾಬ್ದಾರಿಯುವ ಹೇಳಿಕೆ ನೀಡುವ ಬದಲಾಗಿ ಹುಚ್ಚಾಪಟ್ಟೆ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಶಾಸಕರ ಪ್ರಯತ್ನದಿಂದ ಜಾತ್ರೆಗೆ 3.5 ಕೋಟಿ ರೂ. ಅನುದಾನ ಮಂಜೂರಿಯಾಗಿದೆ. ಆದರೆ ಅದರ ಹಣ ಬಿಡುಗಡೆಗೆ ವಿಳಂಬವಾಗುವುದು ಸಹಜ ಪ್ರಕ್ರಿಯೆ. ಈ ಹಿಂದೆ ವಿಶ್ವೇಶ್ವರ ಹೆಗಡೆ ಅವರು ಶಾಸಕರಾಗಿದ್ದಾಗಲೂ ಮಂಜೂರಿಯಾಗಿದ್ದ ಹಣ ವರ್ಷದ ನಂತರ ಬಿಡುಗಡೆಯಾಗಿರುವುದು ದಾಖಲೆಗಳಲ್ಲಿ ಸಿಗಲಿದೆ ಎಂದರು.
ಸರಕಾರದ ಅನುದಾನ ಬಿಡುಗಡೆಗೆ ಕೆಲವು ಮಾನದಂಡವಿದೆ. ಅದರ ಪ್ರಕಾರವೇ ಹೋಗಬೇಕಾಗುತ್ತದೆ. ಆದರೆ ಅನುದಾನದ ಹಣ ಮಂಜೂರಿ ಆದ ತಕ್ಷಣವೇ ಬಿಡುಗಡೆಯಾಗಲ್ಲ. ಅದಕ್ಕೆ ಕೆಲ ಸಮಯಾವಕಾಶ ಬೇಕಾಗುತ್ತದೆ. ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ ನಂತರವೇ ನಮಗೆ ಸಿಗುತ್ತದೆ. ಅಲ್ಲದೇ ಸರಕಾರದಿಂದ ಜಾತ್ರೆಗೆಂದು ಯಾವುದೇ ಅನುದಾನವುಲ್ಲ. ಅದರ ಬದಲಾಗಿ ಬೇರೆ ಬೇರೆ ಯೋಜನೆಗೆಂದು ಅನುದಾನ ತಂದು ನಮ್ಮೂರ ಜಾತ್ರೆಗೆ ವಿನಿಯೋಗಿಸುತ್ತೇವೆ. ಶಾಸಕರಾಗಿ ಒಂದೇ ವರ್ಷದಲ್ಲಿ 193 ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ಮಂಜೂರಿ ಮಾಡಿಸುವಲ್ಲಿ ಸಫಲರಾಗಿದ್ದಾರೆ ಎಂದರು. ಈ ವೇಳೆ ನಗರಸಭೆ ಸದಸ್ಯರಾದ ಖಾದರ ಆನವಟ್ಟಿ, ದಯಾನಂದ ನಾಯ್ಕ, ಪ್ರಾನ್ಸಿಸ್ ನರೋನ್ಹಾ, ವನಿತಾ ಶೆಟ್ಟಿ, ರುಬೆಕಾ ಫರ್ನಾಂಡಿಸ್, ಶಮಿನಾಭಾನು ಇದ್ದರು.

300x250 AD

ನಗರಸಭೆಗೆ ಅಧ್ಯಕ್ಷ ಉಪಾಧ್ಯಕ್ಷ ನೇಮಕಾತಿ ಆಗಲಿ:
ನಗರಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರು ಇಲ್ಲದೇ ಆಡಳಿತ ವ್ಯವಸ್ಥೆ ಅಧಿಕಾರಿಗಳ ಕೈಗೊಂಬೆಯಾಗಿದೆ. ಇದು ಇಡೀ ರಾಜ್ಯದಲ್ಲಿ ಇರುವ ಸಮಸ್ಯೆ. ಈ ರೀತಿ ಆದಲ್ಲಿ ಅಭಿವೃದ್ಧಿಗೆ ತೊಂದರೆ ಉಂಟಾಗುತ್ತಿದೆ. ಜಿಲ್ಲಾಧಿಕಾರಿಗಳು ಅಧ್ಯಕ್ಷರಾದ ಹಿನ್ನೆಲೆಯಲ್ಲಿ ವರ್ಷದಲ್ಲಿ ಎರಡು ಮೂರು ಸಲ ಬಂದು ಸಭೆ ಮಾಡಿದ್ದಾರೆ ಎಂದು ಪ್ರದೀಪ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಸಮಸ್ಯೆಗೆ ನಗರಸಭೆಯ ಎಲ್ಲ ಸದಸ್ಯರೂ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕರು ಕೂಡ ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತಿದ್ದಾರೆ. ಈಗಾಗಲೇ ಸಮಸ್ಯೆ ಪರಿಹಾರಕ್ಕೆ ಎಲ್ಲಿ ಅಗತ್ಯವಿದೆಯೋ ಅಲ್ಲೆಲ್ಲ ಬೋರ್ ಕೊರೆಯಲಾಗಿದೆ.– ಪ್ರದೀಪ ಶೆಟ್ಟಿ, ನಗರಸಭೆ ಸದಸ್ಯ

Share This
300x250 AD
300x250 AD
300x250 AD
Back to top