ಹೊನ್ನಾವರ: ದೈವಜ್ಙ ಬ್ರಾಹ್ಮಣ ಸಮಾಜ ಸಣ್ಣ ಸಮಾಜವಾಗಿದ್ದು ಉದ್ಯೋಗದಲ್ಲಿ ಪ್ರಪಂಚದ ವಿವಿಧೆಡೆ ವಾಸವಾಗಿದೆ. ಇಂದು ಲೋಕಾರ್ಪಣೆಗೊಂಡ ಜ್ಞಾನೇಶ್ವರಿ ಮ್ಯಾಟ್ರಿಮೋನಿ ತಂತ್ರಜ್ಞಾನ ಎಫ್ ನಿಂದ ವೈವಾಹಿಕ ಜೀವನಕ್ಕೆ ಸಹಕಾರಿಯಾಗಿದೆ ಎಂದು ಉದ್ಯಮಿ ಯೋಗೇಶ ರಾಯ್ಕರ ಹೇಳಿದರು.
ಅವರು ಶ್ರೀ ಜ್ಞಾನೇಶ್ವರೀ ಪೀಠ ,ಶ್ರೀಕ್ಷೇತ್ರ ಕರ್ಕಿ ಇದರ ಸಭಾಭನದಲ್ಲಿ ಶುಭ ಮಂಗಲ ಟ್ರಸ್ಟ್,ರಿ. ಆಶ್ರಯದಲ್ಲಿ ನಡೆದ ಜ್ಞಾನೇಶ್ವರೀ ಮ್ಯಾಟ್ರಿಮೋನಿ ವೆಬ್ ಸೈಟ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ,ಪರಿಚಯದ ಸೇತುವೆಯಾಗಿ ದೂರ ದೂರದಲ್ಲಿರುವ ಸಮಾಜ ಬಾಂಧವರಲ್ಲಿ ವೈವಾಹಿಕ ಜೀವನ ನಡೆಸಲು ಸಹಕಾರಿಯಾಗಿದೆ. ಇದರ ರೂವಾರಿ ನಾಗರಾಜ ಭಟ್ಟ ಜ್ಞಾನೇಶ್ವರೀ ಹೆಸರಿನಲ್ಲಿ ಮಾಡಿದ್ದು ವಿಶೇಷವಾಗಿದೆ. ಮಾದರಿಯಾಗಿ ಎಲ್ಲರಿಗೂ ಸಹಕಾರಿಯಾಗಲಿ ಎಂದು ಹಾರೈಸಿದರು.
ಸಾಹಿತಿ ಶ್ರೀಧರ ಶೇಟ್ ಶಿರಾಲಿ ಮಾತನಾಡಿ ಮುಂದುವರಿದ ತಂತ್ರಜ್ಞಾನಕ್ಕೆ ಅನುಗುಣವಾಗಿ ಕಾಲಕ್ಕೆ ತಕ್ಕಂತೆ ವಧು-ವರ ಅನ್ವೇಷಣೆಗೆ ತಂತ್ರಜ್ಞಾನದಿಂದ ಸಿದ್ಧಪಡಿಸಿದ ಎಫ್ ತಂತ್ರಜ್ಞಾನ ಸಹಕಾರಿಯಾಗಿದೆ. ಸಮಾಜದ ಯವಕರು ಸರಿಯಾದ ವಧು ಸಿಗದೇ ಮದುವೆಯಾಗದೇ ಇರುವಂತಾಗಿದೆ.ಮದುವೆ ಸಮಸ್ಯೆ ಪರಿಹರಿಸಲು ಹೊಸ ದಾರಿ ದೀಪವಾಗಲಿದೆ.ಇದರ ಸದುಪಯೋಗ ಪಡೆಯಲು ಕರೆ ನೀಡಿದರು. ಹೊನ್ನಾವರ
ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ ತಾಂಡೇಲ ಮಾತನಾಡಿ ನಾಡಿನ ವಿವಿಧೆಡೆ ಇರುವ ಸಮಾಜದ ವಧು-ವರ ಅನ್ವೇಷಣೆಗಾಗಿ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳ ಆಶೀರ್ವಾದ, ಮಾರ್ಗದರ್ಶನ ಪಡೆದು ವೇದಿಕೆ ಕಲ್ಪಸಿದ ನಾಗರಾಜ ಭಟ್ಟರವರ ಸಮಾಜಮುಖಿ ಕಾರ್ಯಕ್ಕೆ ಶ್ಲಾಘಿಸಿದರು.
ಎಚ್.ಎಮ್. ರಾಘವೇಂದ್ರ ಮಾತನಾಡಿ ದಯಾನಂದ ಶೇಟ್,ಮಂಜೇಶ್ವರ ಇವರು ಕಳೆದ ಒಂದು ವರ್ಷಗಳಿಂದ ಶ್ರಮವಹಿಸಿ ಆಧುನಿಕ ತಂತ್ರಜ್ಞಾನ ಬಳಸಿ ವೆಬ್ ಸೈಟ್ ರೂಪಿಸಿದ್ದು ಪಾಲಕರಿಗೆ,ಪೋಷಕರಿಗೆ ಅನುಕೂಲ ಕಲ್ಪಸಿದೆ.ಮುಂದಿನ ದಿನಗಳಲ್ಲಿ ಧಾರ್ಮಿಕ, ಶೈಕ್ಷಣಿಕ ವಿವರವನ್ನು ಅಳವಡಿಸುವ ಕಾರ್ಯ ನಡೆಯಲಿ ಎಂದರು.ಕರ್ಕಿ ಗ್ರಾ.ಪಂ. ಅಧ್ಯಕ್ಷೆ ವೀಣಾ ಶೇಟ್ ಶುಭ ಕೋರಿದರು.
ತಂತ್ರಜ್ಞರಾದ ದಯಾನಂದ,ಮಂಜೇಶ್ವರ ಪ್ರಾತ್ಯಕ್ಷಿಕೆಯ ಬಳಕೆ ಮಾಹಿತಿ ನೀಡಿದರು. ಕುಮಾರಿ ಆರ್ಯಾ ಭಟ್ಟ ಪ್ರಾತ್ಯಕ್ಷಿಕೆಯ ಬಿಡುಗಡೆ ಮಾಡಿದರು.ತಂತ್ರಜ್ಞರಾದ ಪುನೀತ,ಶರತ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ರೂವಾರಿ ನಾಗರಾಜ ಭಟ್ ದಂಪತಿ ಹಾಗೂ ಪುತ್ರಿ ಇವರಿಗೆ ಸನ್ಮಾನಿಸಲಾಯಿತು .ನಾಗರಾಜ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ದಿವಾಕರ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.