Slide
Slide
Slide
previous arrow
next arrow

ಕಾನೂನು ಸೇವೆಗಳ ಪ್ರಾಧಿಕಾರದಿಂದ ನ್ಯಾಯಾಧೀಶರಿಗೆ ಸನ್ಮಾನ

300x250 AD

ಅಂಕೋಲಾ: ಪದೋನ್ನತಿ ಹೊಂದಿ ಬೆಂಗಳೂರಿಗೆ ವರ್ಗಾವಣೆಗೊಂಡ ಜಿಲ್ಲಾ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ರಾಯ್ಕರ್ ಅವರಿಗೆ ಅಂಕೋಲಾ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಕೀಲ ಉಮೇಶ ನಾಯ್ಕ ಮಾತನಾಡಿ ಮಾನವೀಯತೆಗೆ ಹೆಸರಾದ ನ್ಯಾಯಾಧೀಶೆ ರೇಣುಕಾ ರಾಯ್ಕರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿದ್ದು ಬೇರೆಯಾಗುವ ವಿಚಾರದಲ್ಲಿ ತಮ್ಮ ಬಳಿ ಬಂದ ಪತಿ ಪತ್ನಿಯರಿಗೆ ಬುದ್ಧಿವಾದ ಹೇಳಿ ಒಂದುಗೂಡಿಸುವ ಕೆಲಸ ಮಾಡಿದ್ದರಿಂದ ಇಂದು ಅನೇಕ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ ಎಂದರು.
ಆಗಾಗ ಸರ್ಕಾರಿ ಕಚೇರಿಗಳಿಗೆ, ಆಸ್ಪತ್ರೆಗಳಿಗೆ ಭೇಟಿ ನೀಡಿ ವ್ಯವಸ್ಥೆಗೆ ಚುರುಕು ಮುಚ್ಚಿಸುವ, ಜಾಗೃತಿ ಮೂಡಿಸುವ ಕೆಲಸವನ್ನು ನ್ಯಾಯಾಧೀಶೆ ರೇಣುಕಾ ರಾಯ್ಕರ್ ಮಾಡಿದ್ದಾರೆ ಎಂದು ಹೇಳಿದರು.ಜಿಲ್ಲಾ ನೋಟರಿ ಸಂಘದ ಅಧ್ಯಕ್ಷ ನಾಗಾನಂದ ಬಂಟ, ವಕೀಲ ವಿನೋದ ಶಾನಭಾಗ್, ಕಾರವಾರದ ನ್ಯಾಯವಾದಿ ಮೀನಾಕ್ಷಿ ದುರ್ಗೇಕರ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top