Slide
Slide
Slide
previous arrow
next arrow

ಸಂಗೀತ ಆಸ್ವಾದನೆಯಿಂದ ಒತ್ತಡದ ಬದುಕಿನ ನಿರ್ವಹಣೆ ಸಾಧ್ಯ: ಜಿ.ವಿ.ಭಟ್

300x250 AD

ಯಲ್ಲಾಪುರ: ಒತ್ತಡ ಧಾವಂತದ ಬದುಕಿನ ಸಂದರ್ಭದಲ್ಲಿ
ಸಂಗೀತ ಆಸ್ವಾದನೆಯಿಂದ ಮನಸ್ಸು ಅರಳಲು ಸಾಧ್ಯ ಎಂದು ಆದರ್ಶ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ಜಿ.ವಿ.ಭಟ್ಟ ಅಡ್ಕೆಮನೆ ಹೇಳಿದರು.

ಅವರು ಸೋಮವಾರ ಸಂಜೆ ತಾಲೂಕಿನ ಬಾರೆಯಲ್ಲಿ
ವಸಂತಕಲಾ ಪ್ರತಿಷ್ಠಾನ ಬೀಗಾರ ಹಾಗೂ ವಸಂತಕಲಾ ವಿದ್ಯಾಲಯ ಬಾರೆ ಇವರ ಸಂಯುಕ್ತ ಆಶ್ರಯದಲ್ಲಿ ಬಾರೆ ಗ್ರಾಮದಲ್ಲಿ ಪಂಡಿತ್ ವಸಂತ ಕನಕಾಪೂರ ಅವರ 9ನೇ ಪುಣ್ಯತಿಥಿಯ ಅಂಗವಾಗಿ ಹಮ್ಮಿಕೊಂಡ 9ನೇ ನಾದ ವಸಂತ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನ್ನಾಡುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಕನಕಾಪುರ ಹೆಸರಲ್ಲಿ ಸಂಗೀತಾಭ್ಯಾಸ ಪಾಠ ಮಾಡುತ್ತಿರುವ ಪ್ರತಿಷ್ಠಾನದ ಕೆಲಸ ಮಾದರಿಯಾಗಿದೆ ಎಂದರು.

300x250 AD

ಮಾವಿನಮನೆ ಗ್ರಾ ಪಂ ಅಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಪ್ರತಿಷ್ಠಾನದ ಅಧ್ಯಕ್ಷ ಉಮೇಶ ಬೀಗಾರ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಸಾಂಬಶಿವ ಭಟ್ಟ ಸುಬ್ಬಣ್ಣ ಬೋಳ್ಮನೆ , ಗಣೇಶ ಕಿರಗಾರೆ, ಶಶಿಧರ್ ಭಟ್, ವಿನಾಯಕ ಸಿದ್ಧಿ, ರಾಮಚಂದ್ರ, ಉನ್ನತಿ ಉಮೇಶ ಗಣಪತಿ ನೀರೇಹಕ್ಲು, ಭಾಗವಹಿಸಿದ್ದರು. ನಂತರ ಸಂಗೀತ ವಿದ್ಯಾಲಯದ ವಿಧ್ಯಾರ್ಥಿಗಳಿಂದ ಸಂಗೀತ ಶಿಕ್ಷಕ ಉಮೇಶ ಗೌಡ ಬೀಗಾರ ಮಾರ್ಗದರ್ಶನದಲ್ಲಿ ನಡೆದ ನಾದ ವಸಂತ ಸಂಗೀತ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.

Share This
300x250 AD
300x250 AD
300x250 AD
Back to top