ಶಿರಸಿ: ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿಜ್ಞಾನ ವೇದಿಕೆ, ಮಕರಂದ ರೈತ ಉತ್ಪಾದಕರ ಸಹಕಾರಿ ಸಂಘ ಶಿರಸಿ. ಇವರುಗಳ ಸಂಯೋಗದಲ್ಲಿ ‘ಜೇನು ಹಬ್ಬ’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಜೇನು ಕೃಷಿಯ ಕುರಿತಾಗಿ, ಜೇನುಹುಳಗಳ ಕುರಿತಾಗಿ ಸಮಗ್ರ ಮಾಹಿತಿ ಒದಗಿಸುವುದಲ್ಲದೆ ಕಾಲೇಜಿನ ರಸಾಯನಶಾಸ್ತ್ರ ವಿಭಾಗದಲ್ಲಿ ಇಟ್ಟಿರುವ ಜೇನುಪೆಟ್ಟಿಗೆಯ ಜೇನನ್ನು ತೆಗೆದು ಜೇನಿನ ವೈಶಿಷ್ಟ್ಯ ಹಾಗೂ ಕಾರ್ಯವಿಧಾನಗಳನ್ನು ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಿಗೆ ಪರಿಚಯಿಸುವ ಕಾರ್ಯವನ್ನು ಮಾಡಲಾಯಿತು. ಮಕರಂದ ರೈತೋತ್ಪಾದಕ ಸಂಘದ ಹರ್ಷ ಹೆಗಡೆ ಮಾಹಿತಿಯನ್ನು ಒದಗಿಸಿದರು. ಪ್ರಾಧ್ಯಾಪಕರು ಆಡಳಿತ ಮಂಡಳಿಯವರು ವಿದ್ಯಾರ್ಥಿಗಳು ಜೇನು ರಟ್ಟು ಸಹಿತ ಜೇನುತುಪ್ಪವನ್ನು ಸವಿದು ಮಾಹಿತಿಯನ್ನು ಪಡೆದುಕೊಂಡರು. ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೇಮನೆ, ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಗಣೇಶ ಹೆಗಡೆ ಪ್ರಾಧ್ಯಾಪಕರು ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.