Slide
Slide
Slide
previous arrow
next arrow

SSLC: ಹೆಗಡೆಕಟ್ಟಾ ಪ್ರೌಢಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

300x250 AD

ಶಿರಸಿ: ಹೆಗಡೆಕಟ್ಟಾದ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಕುಳಿತ 45ನೇ ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಯ ಫಲಿತಾಂಶ ಶೇಕಡ 95.55 ಆಗಿದೆ. ಶಾಲೆಯ ಗುಣಾತ್ಮಕ ಫಲಿತಾಂಶ “ಎ” ಗ್ರೇಡ್ ಆಗಿದೆ.
ಕುಮಾರಿ ಸೌಖ್ಯ ವಿನಾಯಕ ಹೆಗಡೆ ಶೇಕಡ 97.92 ಅಂಕಗಳಿಸಿ ಶಾಲೆಗೆ ಪ್ರಥಮ ಕುಮಾರ ಡಿ ಎಸ್ ನಾಗಾನಂದ ಶೇಕಡ 96.48 ಅಂಕಗಳಿಸಿ ದ್ವಿತೀಯ ಕುಮಾರಿ ಅನನ್ಯ ಗೋಪಾಲ ಶೆಡಗೇರಿ ಶೇಕಡ 95.36 ಅಂಕ ಗಳಿಸುವ ಮೂಲಕ ತೃತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ನ ಅಧ್ಯಕ್ಷ ಎಂ.ಆರ್.ಹೆಗಡೆ ಹೊನ್ನೇಕಟ್ಟಾ, ಆಡಳಿತ ಮಂಡಳಿ ಸದಸ್ಯರು, ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top