Slide
Slide
Slide
previous arrow
next arrow

ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಮುಕ್ತಾಯ

300x250 AD

ಶಿರಸಿ: ಇತ್ತೀಚೆಗೆ ಇಲ್ಲಿನ ಮರಾಠಿಕೊಪ್ಪದ ಶ್ರೀ ಸದ್ಗುರು ನಿತ್ಯಾನಂದ ಮಠದಲ್ಲಿ ನಡೆದ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿತ್ಯಾನಂದ ಮಠದ ಅಧ್ಯಕ್ಷರಾದ ವಿಷ್ಣು ಹರಿಕಾಂತ್ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಮಾರಿಕಾಂಬಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಮತ್ತು ಶ್ರೀನಿಕೇತನ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿಗಳು ಆದ ಕೆ.ಎನ್. ಹೊಸಮನಿ ಇವರು ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರಗಳ ಪ್ರಸ್ತುತತೆ ಯ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀನಿಕೇತನ ಶಾಲೆ ಪ್ರಾಂಶುಪಾಲ ವಸಂತ್ ಭಟ್ ಇವರು ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರದ ಬಗ್ಗೆ ತಿಳಿಸಿದರು. ಜಿ.ಕೆ. ಎಂಟರ್ಪ್ರೈಸಸ್ ಮಾಲೀಕರು ಮತ್ತು ಗ್ರೀನ್ ಕೇರ್ (ರಿ.) ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ ತೋನ್ಸೆ ಆರೋಗ್ಯ ಮತ್ತು ಪರಿಸರದ ಬಗ್ಗೆ ಮತ್ತು ಮೊಬೈಲ್ ಬಳಕೆಯ ಅಡ್ಡ ಪರಿಣಾಮಗಳ ಬಗ್ಗೆ ವಿವರಿಸಿದರು, ವಿಜಯ ಕರ್ನಾಟಕದ ವರದಿಗಾರರಾದ ಕೃಷ್ಣಮೂರ್ತಿ ಕೆರೆಗದ್ದೆಯವರು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಶ್ರೀ ನಿತ್ಯಾನಂದ ಮಠದ ನಿಂಗಪ್ಪ ಕೊಂಡ್ಲಿಯವರು ಉಪಸ್ಥಿತರಿದ್ದರು.

300x250 AD

ಶಿಬಿರದ ಸಂಯೋಜಕಿ ಶ್ರೀಮತಿ ಮಮತಾ ಗಣಪತಿ ನಾಯ್ಕ ಏ.6ರಿಂದ ವಿ.14ರವರಗೆ ಶಿಬಿರದ ಸವಿಸ್ತಾರವಾದ ವರದಿಯನ್ನು ಓದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದಲ್ಲಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು ಮತ್ತು ಶಿಬಿರಾರ್ಥಿಗಳ ಪೋಷಕರಿಗೂ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಶ್ರೀಮತಿ ಅಶ್ವಿನಿ ರಘು ಅವರು ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ನೇತ್ರಾವತಿ ಆರ್ ಗುಡ್ಡದ ಮನೆ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ರೇಷ್ಮಾ ಪಿ. ದೇಶಪಾಂಡೆ ವಂದನಾರ್ಪಣೆಯನ್ನು ಮಾಡಿದರು.ಕೊನೆಯಲ್ಲಿ ಮಕ್ಕಳಿಂದ ಮನೋರಂಜನಾ ನಡೆಯಿತು.

Share This
300x250 AD
300x250 AD
300x250 AD
Back to top