Slide
Slide
Slide
previous arrow
next arrow

ಏ.7ಕ್ಕೆ ಗಾಯನ-ವಾದನ-ಸನ್ಮಾನ

300x250 AD

ಶಿರಸಿ: ನಗರದ ಮಿತ್ರಾ ಮ್ಯೂಸಿಕಲ್ಸ್ ಹಾಗೂ ರಾಗಮಿತ್ರ ಪ್ರತಿಷ್ಠಾನದ 32ನೇ ವಾರ್ಷಿಕೋತ್ಸವದ ಅಂಗವಾಗಿ `ಗಾಯನ-ವಾದನ-ಸನ್ಮಾನ’ ವಿಶೇಷ ಕಾರ್ಯಕ್ರಮವನ್ನು ನೆಮ್ಮದಿ ಕುಟೀರದ ರಂಗಧಾಮದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಶಾಲೆಯ ವಿದ್ಯಾರ್ಥಿಗಳ ಗಾಯನ, ಆಮಂತ್ರಿತ ಕಲಾವಿದರ ಗಾಯನ ಹಾಗೂ ವಾರ್ಷಿಕವಾಗಿ ನೀಡಲ್ಪಡುವ ಬಿರುದು ಪ್ರದಾನ ನಡೆಯಲಿದೆ.

ಮಧ್ಯಾಹ್ನ 12.30ರಿಂದ 1.30ರವರೆಗೆ ನಡೆಯಲಿರುವ ಗಾಯನ ವಾದನದಲ್ಲಿ ಬೆಂಗಳೂರಿನ ಕಿರಣ ಕಮಲಾಕರ ಭಟ್ ತಬಲಾ ಕಾರ್ಯಕ್ರಮ ನಡೆಯಲಿದೆ. ಇಳಿಹೊತ್ತು 6 ಗಂಟೆಯಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು ವರ್ಷದ ರಾಗರತ್ನ ಬಿರುದನ್ನು ಹಿರಿಯ ಸಂಗೀತಗಾರರಾದ ಪಂ. ಪರಮೇಶ್ವರ ಹೆಗಡೆ ಕಲಭಾಗ್‌ರವರಿಗೆ ಹಾಗೂ ಕನಕಶ್ರೀ ಬಿರುದನ್ನು ತಬಲಾ ವಾದಕ ಪಂ. ಗೋಪಾಲಕೃಷ್ಣ ಹೆಗಡೆ ಕಲಭಾಗ್‌ರವರಿಗೆ ಪ್ರದಾನ ಮಾಡಲಾಗುವುದು.

300x250 AD

ಸಭಾಧ್ಯಕ್ಷತೆಯನ್ನು ಸಾಮಾಜಿಕ ಕಾರ್ಯಕರ್ತ ರಘುಪತಿ ಭಟ್ಟ ಸುಗಾವಿ ವಹಿಸಲಿದ್ದು ಅತಿಥಿಯಾಗಿ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಆರ್ ಜಿ ನಾಯ್ಕ, ಪ್ರದೀಪ ಜ್ಯುವೆಲರ್ಸ್ ಪ್ರದೀಪ ಯಲ್ಲನಕರ್, ಪತ್ರಕರ್ತ ನಾಗರಾಜ ಮತ್ತಿಗಾರ್, ಸಂತೋಷ ಜ್ಯುವೆಲರ್ಸ್ ರಾಜು ಮಧುಕರ ಶೇಟ್, ರಾಗಮಿತ್ರ ಪ್ರತಿಷ್ಠಾನದ ಎಂ.ಎನ್. ಹೆಗಡೆ ಮಾಳೆನಳ್ಳಿ ಪಾಲ್ಗೊಳ್ಳಲಿದ್ದಾರೆ. ಸಭಾಕಾರ್ಯಕ್ರಮದ ನಂತರ ಖ್ಯಾತ ಗಾಯಕ ಪಂ. ಪರಮೇಶ್ವರ ಹೆಗಡೆ ಕಲಭಾಗರವರಿಂದ ಸಂಗೀತ ಕಛೇರಿ ನಡೆಯಲಿದ್ದು ತಬಲಾದಲ್ಲಿ ಪಂ. ಗೋಪಾಲಕೃಷ್ಣ ಹೆಗಡೆ ಕಲಭಾಗ್ ಹಾಗೂ ಹಾರ್ಮೋನಿಯಂನಲ್ಲಿ ವಿ. ಪ್ರಕಾಶ ಹೆಗಡೆ ಯಡಳ್ಳಿ ಸಹಕರಿಸಲಿದ್ದಾರೆ.
ಆಮಂತ್ರಿತ ಕಲಾವಿದರ ಕಾರ್ಯಕ್ರಮದ ಪೂರ್ವ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಸಂವಾದಿನಿಯಲ್ಲಿ ಗೀತಾ ಜೋಶಿ ಬೆಂಗಳೂರು, ಅಂಜನಾ ಹೆಗಡೆ ಶಿರಸಿ, ಉನ್ನತಿ ಕಾಮತ್ ಶಿರಸಿ ಹಾಗೂ ತಬಲಾದಲ್ಲಿ ಕಿರಣ್ ಹೆಗಡೆ ಕಾನಗೋಡ, ವಿಜಯೆಂದ್ರ ಅಜ್ಜೀಬಳ್, ಸುಧಾಕರ ನಾಯಕ, ಸನತ್‌ರಾವ್ ಶಿರಸಿ ಸಹಕರಿಸಲಿದ್ದಾರೆ ಎಂದು ರಾಗಮಿತ್ರ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.

Share This
300x250 AD
300x250 AD
300x250 AD
Back to top