ಸಿದ್ದಾಪುರ:ತಾಲೂಕಿನ ಕೋಡಿಗದ್ದೆಯ ಶ್ರೀ ಶಂಭುಲಿಂಗೇಶ್ವರ, ಮಹಿಷಾಸುರ ಮರ್ದಿನಿ ದೇವಾಲಯದ ದೇವರ ವಾರ್ಷಿಕ ಉತ್ಸವವು ಜರುಗಿತು. ಉತ್ಸವದ ಅಂಗವಾಗಿ ನವಚಂಡಿ ಹವನ, ಶತರುದ್ರಾಹವನ, ರುದ್ರಾಭಿಷೇಕ, ಗ್ರಹಶಾಂತಿ ಮುಂತಾದ ದೇವತಾ ಕಾರ್ಯಕ್ರಮಗಳು ಹಾಗೂ ಪ್ರಸಾದ ವಿತರಣೆ ಬಳಿಕ ರಾತ್ರಿ 10.00 ಗಂಟೆಯಿಂದ ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ ರಿ. ದೊಡ್ಮನೆ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಸಂಪೂರ್ಣ ದೇವಿ ಮಹಾತ್ಮೆ ಎಂಬ ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಹಿಮ್ಮೇಳದಲ್ಲಿ ಕೃಷ್ಣ ಮರಾಠಿ ಕೆಲವೆ, ಭಾರ್ಗವ ಮುಂಡಿಗೆಸರ, ಮಂಜುನಾಥ ರಾವ್ ಗುಡ್ಡೆದಿಂಬ, ಶ್ರೀವತ್ಸ ಗುಡ್ಡೆದಿಂಬ, ಗಣೇಶ ಭಟ್ಟ ಕೆರೆಕೈ ಇವರುಗಳು ಉತ್ತಮ ಸಾಥ್ ನೀಡಿದರು. ಮುಮ್ಮೆಳದಲ್ಲಿ ಸದಾನಂದ ಕೋಳಿಗಾರ್ ಶಿರಸಿ, ಜೈಕುಮಾರ ಮೆಣಸಿ, ಮಹೇಶ ಕಿಲವಳ್ಳಿ, ಜನಾರ್ಧನ ಹಾರ್ಸಿಕಟ್ಟಾ, ನಂದನ್ ನಾಯ್ಕ ಹಾರ್ಸಿಕಟ್ಟಾ, ಎಮ್. ಆರ್ ಭಟ್ ಗೊಂಟನಾಳ, ಮಾರುತಿ ಗೋಳಿಕೈ, ಕೃಷ್ಣ ಗೌಡ ವಾನಳ್ಳಿ, ಸುದರ್ಶನ ಭಟ್ ಸೊರಬ, ವಿನಾಯಕ ಭಟ್ ಹೊನ್ನಾವರ ಹಾಗೂ ಇತರರು ವಿವಿಧ ಪಾತ್ರ ನಿರ್ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಪ್ರಸಾದನ ವ್ಯವಸ್ಥೆಯಲ್ಲಿ ಎಮ್. ಆರ್. ನಾಯ್ಕ ಕರ್ಸೆಬೈಲು ಸಹಕರಿಸಿದರು. ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಲ್ಲಿ ಗಜಾನನ ಕೊಡಿಯಾ ವಂದಾನೆ ಇವರು ಸಹಕರಿಸಿದರು. ಕೋಡಿಗದ್ದೆ ಯಕ್ಷಗಾನ ಸಂಘದ ಕೇಶವ ಹೆಗಡೆ ಕಿಬ್ಳೆ ಹಾಗೂ ಶ್ರೀಧರ ಭಟ್ ಗಡಿಹಿತ್ಲು ಇವರುಗಳು ಸಹಕರಿಸಿ ಕಾರ್ಯಕ್ರಮ ನಿರ್ವಹಿಸಿದರು.