ಶಿರಸಿ: ಇಲ್ಲಿನ ಕಾಮತ್ ಪ್ಲಾಜಾ ಮತ್ತು ಬೈನರಿ ಸಿಸ್ಟಮ್ ಮಾಲಿಕ, ರೊ.ಪ್ರವೀಣ್ ಕಾಮತ್ ಮತ್ತು ಪ್ರಿಯಾಂಕಾ ಕಾಮತ್ ದಂಪತಿಗಳ ದ್ವಿತೀಯ ಪುತ್ರನಾದ ಡಾ.ಸೌರವ್ ಪ್ರವೀಣ್ ಕಾಮತ್, ಧಾರವಾಡದ ಪ್ರತಿಷ್ಠಿತ SDM ಕಾಲೇಜಿನಲ್ಲಿ MBBS ಪದವಿಯನ್ನು ಜನರಲ್ ಸರ್ಜರಿಯಲ್ಲಿ ಗೋಲ್ಡ್ ಮೆಡಲ್ ಪಡೆಯುವ ಮೂಲಕ ಶಿರಸಿಗೆ ಕೀರ್ತಿ ತಂದಿದ್ದಾನೆ.
ಧಾರವಾಡದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ, ಕಾಲೇಜಿನ ಅಧ್ಯಕ್ಷರೂ, ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆದ ವೀರೇಂದ್ರ ಹೆಗಡೆಯವರು ಬಂಗಾರದ ಪದಕ ನೀಡಿ ಗೌರವಿಸಿ, ಸನ್ಮಾನಿಸಿದರು. ಸರ್ಜರಿಯಲ್ಲಿ ವಿಶೇಷ ಅಭಿರುಚಿ, ಪರಿಣತಿ ಮತ್ತು ಪ್ರೀತಿ ಹೊಂದಿರುವ ಡಾ.ಸೌರವ್ ಕಾಮತ್, ಸ್ನಾತಕೋತ್ತರ ಪದವಿಯನ್ನು ಪೂರೈಸಿ, ಶಿರಸಿಗೆ ಮರಳಿ ತನ್ನ ವೈದ್ಯಕೀಯ ಸೇವೆಯನ್ನು ಶಿರಸಿ ಜನತೆಗೆ ನೀಡಲಿ ಎಂದು ಶಿರಸಿ ರೋಟರಿ ಸದಸ್ಯರ ಬಯಕೆಯಾಗಿದೆ.
ಅವನ ಈ ಸಾಧನೆಯನ್ನು ಶಿರಸಿಯ ರೋಟರಿ ಕ್ಲಬ್, ಜಿ.ಎಸ್.ಬಿ. ಸಮಾಜ, ಇಂಜಿನಿಯರ್ಸ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಸದಸ್ಯರು ಅಭಿನಂದಿಸಿ, ಶ್ಲಾಘಿಸಿದ್ದಾರೆ.