Slide
Slide
Slide
previous arrow
next arrow

ಹಿರಿಯ ಸಮಾಜಸೇವಕ ಮುಸ್ತಾಕ್ ಅಹಮ್ಮದ್ ಬಸರಿಕಟ್ಟಿ ನಿಧನ

300x250 AD

ಹಳಿಯಾಳ : ತಾಲೂಕಿನ ಖ್ಯಾತ ಉದ್ಯಮಿ ಹಿರಿಯ ಸಮಾಜಸೇವಕರಾದ ಮುಸ್ತಾಕ್ ಅಹಮ್ಮದ್ ಬಸರಿಕಟ್ಟಿ  ಶುಕ್ರವಾರ ವಿಧಿವಶರಾದರು. ಮೃತರಿಗೆ 63 ವರ್ಷ ವಯಸ್ಸಾಗಿತ್ತು.

ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಮುಸ್ತಾಕ್ ಅಹಮ್ಮದ್ ಬಸರಿಕಟ್ಟಿಯವರು ಸರ್ವಧರ್ಮ ಸಮನ್ವಯತೆಯ ಸಮಾಜ ಸೇವಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಅನೇಕ ಜನರಿಗೆ ತಮ್ಮ ಉದ್ಯಮದಲ್ಲಿ ಉದ್ಯೋಗದ ಅವಕಾಶವನ್ನು ನೀಡಿದ ಹೆಗ್ಗಳಿಕೆಯ ಜೊತೆಗೆ ಸಂಕಷ್ಟದಲ್ಲಿದ್ದವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮನೆ ಮಾತಾಗಿದ್ದರು.

ತನ್ನ ಪರಿಶ್ರಮದ ಶ್ರಮ ಸಾಧನೆಯ ಮೂಲಕ ಉದ್ಯಮದಲ್ಲಿ ಪ್ರಗತಿಯ ಉತ್ತುಂಗಕ್ಕೇರಿದ ಮುಸ್ತಾಕ್ ಅಹಮ್ಮದ್ ಬಸರಿಕಟ್ಟಿಯವರು ಬಡವರ ಬಂಧುವಾಗಿ ಜನ ಪ್ರೀತಿಗೆ ಪಾತ್ರರಾಗಿದ್ದರು.

300x250 AD

ಮೃತರು 7 ಜನ ಸಹೋದರರು, ಇಬ್ಬರು ಸಹೋದರಿಯರು, ಪತ್ನಿ, ಇಬ್ಬರು ಸುಪುತ್ರರು ಮತ್ತು ಇಬ್ಬರು ಸುಪುತ್ರಿಯರನ್ನು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ, ಮಾಜಿ ಶಾಸಕರಾದ ಸುನೀಲ್ ಹೆಗಡೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಘೋಟ್ನೇಕರ್, ಹಳಿಯಾಳದ ಖ್ಯಾತ ಉದ್ಯಮಿ ಶ್ರೀಪತಿ.ಕೆ. ಭಟ್, ಮಾರುತಿ ಉದ್ಯಮ್ಸ್ ಇದರ ರಮೇಶ‌ ನಾಯಕ್, ದಾಂಡೇಲಿಯ ಕಾಂಗ್ರೆಸ್ ಮುಖಂಡರಾದ ಮುನ್ನ ವಹಾಬ್,ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪಾಟೀಲ್, ಕೆಪಿಸಿಸಿ ಸದಸ್ಯರಾದ ಸುಭಾಷ್ ಕೋರ್ವೇಕರ್, ಬಿಜೆಪಿ ಪಕ್ಷದ ನಿಕಟಪೂರ್ವ ಅಧ್ಯಕ್ಷರಾದ ಗಣಪತಿ ಕರಂಜೇಕರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ಶಿರಸಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ಟಿ.ಎಸ್.ಬಾಲಮಣಿ, ದಾಂಡೇಲಿ ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್, ದಾಂಡೇಲಿಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉಸ್ಮಾನ್ ಮುನ್ನ ವಹಾಬ್,  ಪ್ರವಾಸೋದ್ಯಮಿಗಳಾದ ವಿಷ್ಣುಮೂರ್ತಿ ರಾವ್, ರಾಘವೇಂದ್ರ ಶೆಟ್ಟಿ, ಹಳಿಯಾಳ ಪುರಸಭೆಯ ಮಾಜಿ ಅಧ್ಯಕ್ಷರಾದ ಉಮೇಶ ಬೋಳಶೆಟ್ಟಿ, ಹಳಿಯಾಳ ಯುವ ಕಾಂಗ್ರೆಸ್ ಅಧ್ಯಕ್ಷರಾದ ರವಿ ತೋರಣಗಟ್ಟಿ, ಹಳಿಯಾಳ‌ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ ಬೆಳಗವಕರ, ಕಾಂಗ್ರೆಸ್ ಮುಖಂಡರುಗಳಾದ ಸತ್ಯಜಿತ್ ಗಿರಿ, ಪ್ರಸಾದ್ ಹುಣ್ಸವಾಡ್ಕರ್, ಪುರಸಭೆಯ ಸದಸ್ಯರಾದ ಉದಯ್ ಹೂಲಿ, ಪ್ರಮುಖರಾದ ಪ್ರಕಾಶ್ ಪ್ರಭು, ಶಿವ ದೇಸಾಯಿಸ್ವಾಮಿ ಮೊದಲಾದವರು ಸೇರಿದಂತೆ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top