ಕಾರವಾರ: ಉತ್ತರ ಕನ್ನಡ ಜಿಲ್ಲಾ ಚದುರಂಗ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಸರಕಾರಿ ನೌಕರರ ಸಂಘ ಕಾರವಾರ ಇವರ ಸಹಯೋಗದೊಂದಿಗೆ ಏ.23 ಹಾಗೂ ಏ.24 ರಂದು ಕಾರವಾರದ ಸರಕಾರಿ ನೌಕರರ ಭವನ, ಎಮ್. ಜಿ. ರೋಡ್ ನಲ್ಲಿ ಆಯೋಜಿಸಲಾಗಿದೆ.
ಪಂದ್ಯಾವಳಿಯ ಮುಕ್ತ, 25 ವರ್ಷದೊಳಗಿನ ಹಾಗೂ 17 ವರ್ಷದೊಳಗಿನವರ ವಿಭಾಗದ ರಾಜ್ಯ ಆಯ್ಕೆಯ ಪಂದ್ಯಾವಳಿಯಾಗಿರುತ್ತದೆ. ಒಟ್ಟು 27,500/- ರೂ. ನಗದು ಹಾಗೂ ಟ್ರೋಫಿಗಳನ್ನು ವಿಜೇತರಿಗೆ ವಿತರಿಸಲಾಗುವುದು. ಪ್ರಥಮ ಬಹುಮಾನ ರೂ. 4,000/- ಮತ್ತು ಟ್ರೋಫಿ, ದ್ವಿತೀಯ ರೂ. 3,000/- ಮತ್ತು ಟ್ರೋಫಿ, ತೃತೀಯ ರೂ. 2,000/- ಮತ್ತು ಟ್ರೋಫಿ, ಚತುರ್ಥ ರೂ. 1,000/- ಮತ್ತು ಟ್ರೋಫಿ, ಉತ್ತಮ ಮಹಿಳಾ ಆಟಗಾರ್ತಿ ಪ್ರಥಮ 1,500/- ಮತ್ತು ಟ್ರೋಫಿ, ದ್ವಿತೀಯ ರೂ. 1,000/- ಮತ್ತು ಟ್ರೋಫಿ, 25 ವರ್ಷದೊಳಗಿನ ವಿಭಾಗ ಪ್ರಥಮ ರೂ. 2,500 ಮತ್ತು ಟ್ರೋಫಿ, ದ್ವಿತೀಯ 1,500/- ಮತ್ತು ಟ್ರೋಫಿ, ತೃತೀಯ ರೂ. 1000/- ಮತ್ತು ಟ್ರೋಫಿ, ಉತ್ತಮ ಮಹಿಳಾ ಆಟಗಾರ್ತಿ ಪ್ರಥಮ ರೂ. 1,500/- ದ್ವಿತೀಯ ರೂ. 1,000/-ಮತ್ತು ಟ್ರೋಫಿ, 17 ವರ್ಷದೊಳಗಿನ ವಿಭಾಗ ವಿಭಾಗ ಪ್ರಥಮ ರೂ. 2,500 ಮತ್ತು ಟ್ರೋಫಿ, ದ್ವಿತೀಯ 1,500/- ಮತ್ತು ಟ್ರೋಫಿ, ತೃತೀಯ ರೂ. 1000/- ಮತ್ತು ಟ್ರೋಫಿ, ಉತ್ತಮ ಬಾಲಕಿ ಆಟಗಾರ್ತಿ ಪ್ರಥಮ ರೂ. 1,500/- ಮತ್ತು ಟ್ರೋಫಿ, ದ್ವಿತೀಯ ರೂ. 1,000/- ಮತ್ತು ಟ್ರೋಫಿಗಳನ್ನೊಳಗೊಂಡ ಪಂದ್ಯಾವಳಿಯು ಫಿಡೆ ಸ್ವಿಸ್ ಲೀಗ್ ಮಾದರಿಯಲ್ಲಿ 30 ನಿಮಿಷ ಮತ್ತು 10 ಸೆಕೆಂಡ್ ಪ್ರತಿ ನಡೆಗೆ ಸೇರ್ಪಡೆಯಾಗಿ ಜರುಗಲಿದೆ. ಆಟಗಾರರು ತಮ್ಮ ವಸತಿ ಸೌಲಭ್ಯವನ್ನು ಸ್ವತಃ ಮಾಡಿಕೊಳ್ಳತಕ್ಕದ್ದು. ಆಸಕ್ತರು 300/- ರೂ. ಪ್ರವೇಶ ಶುಲ್ಕದೊಂದಿಗೆ ಏ.22 ರೊಳಗಾಗಿ ತಮ್ಮ ಹೆಸರನ್ನು ವಾಟ್ಸ್ ಆಪ್ ಮುಖಾಂತರ ನೊಂದಾಯಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ನವೀನ ಹೆಗಡೆ (ಕಾರ್ಯದರ್ಶಿ) ಮೊ. ನಂ. :Tel:+919480621062 (ವಾಟ್ಸ್ ಆಪ್) ಅಥವಾ ರಾಮಚಂದ್ರ ಭಟ್ (ಉಪಾಧ್ಯಕ್ಷರು) ಮೊ. ನಂ. :Tel:+919481360128 ಇವರನ್ನು ಸಂಪರ್ಕಿಸಬಹುದಾಗಿದೆ.