ಶಿರಸಿ : ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನಡುವಿನ ಸುಮಾರು 158 ಕಿ.ಮೀ. ಮಾರ್ಗದ ಹೊಸ ರೈಲು ಮಾರ್ಗ ಯೋಜನೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ ಬೆನ್ನಲ್ಲೇ ನೈಋತ್ಯ ರೈಲ್ವೆ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದು ಸರ್ವೆ ಕಾರ್ಯ ಪೂರ್ಣಗೊಂಡಿತ್ತು.
ಇದರ ಬೆನ್ನಲ್ಲೇ ಶಿರಸಿಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ರವರಿಗೆ ಪೆಬ್ರುವರಿ 27 ರಂದು ತಾಳಗುಪ್ಪಾ ಶಿರಸಿ ಹುಬ್ಬಳ್ಳಿ ರೈಲ್ವೇ ವಿಸ್ತರಣೆ ಯೋಜನೆಯ 158 ಕಿಮೀಗಳ ಫೈನಲ್ ಲೊಕೇಶನ್ ಸರ್ವೇ ನಡೆಸಲು ತುರ್ತಾಗಿ ಮಂಜೂರಾತಿ ನೀಡಲು ಬರೆದ ಪತ್ರಕ್ಕೆ ಸಚಿವರು ಸ್ಪಂದಿಸಿ ಫೈನಲ್ ಲೊಕೇಶನ್ ಸರ್ವೇ ನಡೆಸಿ ಡಿಟೈಲ್ಡ್ ಪ್ರಾಜೆಕ್ಟ್ ರಿಪೋರ್ಟನ್ನು ನೀಡಲು 3.95 ಕೋಟಿ ರೂಪಾಯಿಗಳನ್ನು ಮಾರ್ಚ 15ರಂದು ಮಂಜೂರಾತಿ ನೀಡಿದ್ದಾಗಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.