ಸಿದ್ದಾಪುರ: ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಅವರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಿದ್ದಾಪುರ ತಾಲೂಕಿನ ವಿವಿಧ ಕಾಮಗಾರಿಗಳಿಗೆ 25 ಲಕ್ಷ ಅನುದಾನ ಮಂಜೂರಾಗಿದ್ದು ನಿರ್ಮಿತಿ ಕೇಂದ್ರದ ಮೂಲಕ ಅನುಷ್ಠನಗೊಳಿಸುವಂತೆ ಸೂಚಿಸಲಾಗಿದೆ.
ಸಿದ್ದಾಪುರ ತಾಲೂಕಿನ ನಾಮಧಾರಿ ಸಂಘದ ಸಮುದಾಯ ಭವನದ ಕಟ್ಟಡ ಕಾಮಗಾರಿಗೆ 10 ಲಕ್ಷ, ಮನಮನೆ ಊರಿನ ಸಭಾಭವನದ ಕಟ್ಟಡ ಕಾಮಗಾರಿಗೆ 5 ಲಕ್ಷ ಹಾಗೂ ಕಾವಂಚೂರು ಗ್ರಾಮ ಪಂಚಾಯ್ತಿಯ ನೆಜ್ಜೂರು ಮುಸ್ಲಿಂ ಸಮುದಾಯದ ಸ್ಮಶಾನಕ್ಕೆ ಕಂಪೌಂಡ್ ವಾಲ್ ನಿರ್ಮಾಣಕ್ಕೆ 10 ಲಕ್ಷ ಸೇರಿ ಒಟ್ಟು 25 ಲಕ್ಷ ಅನುದಾನ ಮಂಜೂರಿ ಮಾಡಿ ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ತಮ್ಮ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಮಂಜೂರಿ ಮಾಡಿಸಿದ ಬಿ.ಕೆ.ಹರಿಪ್ರಸಾದ ಅವರಿಗೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಕೃತಜ್ಞತೆ ಸಲ್ಲಿಸಿದ್ದಾರೆ.