ಹೊನ್ನಾವರ; ಪ್ರಸಿದ್ದ ಯಕ್ಷಗಾನ ಕಲಾವಿದರನ್ನು ಕಲಾ ಜಗತ್ತಿಗೆ ಪರಿಚಯಿಸಿದ ಊರು ಹೊನ್ನಾವರ ಆಗಿದ್ದು, ಇಂದಿಗೂ ಅನೇಕ ಉದಯೊನ್ಮಖ ಕಲಾವಿದರನ್ನು ಈ ಕ್ಷೇತ್ರದತ್ತ ಪರಿಚಯಿಸುತ್ತಿದೆ ಎಂದು ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೆಶಕರಾದ ಶಿವಾನಂದ ಹೆಗಡೆ ಕಡತೋಕಾ ಯಕ್ಷಗಾನ ಕಲೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಸಾಲ್ಕೋಡ್ ಕಾಶಿಕೆರೆ ಬೊಂಡಕಾರ ದೇವಾಲಯದ ಬಯಲಿನಲ್ಲಿ ನಡೆದ “ಪಾಪಣ್ಣ ವಿಜಯ- ಗುಣಸುಂದರಿ” ಬಯಲಾಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿವರ್ಷವು ಈ ಭಾಗದಲ್ಲಿ ದೇವರ ಸೇವೆಯ ಜೊತೆ ಕಲಾ ಸೇವೆಯ ಮೂಲಕ ಉತ್ತಮ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಮಾಡಿಸಿ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಯಕ್ಷಗಾನ ಕನ್ನಡ ಭಾಷೆ ಮತ್ತು ಸಂಸ್ಕೃತಿ ಪರಿಚಯಿಸುವ ಕಾರ್ಯ ಮಾಡುತ್ತಿದೆ ಎಂದು ಪ್ರಸಂಸೆ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಮಾತನಾಡಿ ಸನಾತನ ಧರ್ಮ ಪರಂಪರೆ ಉಳಿಸಲು ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ. ಗ್ರಾಮದಲ್ಲಿ ಒಗ್ಗಟ್ಟು, ಕಲೆಗಳ ಪ್ರಚಾರಕ್ಕೆ ಗೆಳೆಯರ ಬಳಗವು ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಯಶ್ವಸಿಯಾಗಿ ಕಾರ್ಯಕ್ರಮ ಆಯೋಜಿಸುವ ಮೂಲಕ ಮಾದರಿಯಾಗಿದೆ ಎಂದರು.
ಮದ್ದಳೆ ವಾದರಕರಾದ ನಾಗರಾಜ ಭಂಡಾರಿ ಹಿರೆಬೈಲ್ ಇವರನ್ನು ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ದೇವಾಲಯದ ಅರ್ಚಕರಾದ ಮಂಜುನಾಥ ಭಟ್, ಸಿ.ಜೆ.ಹೆಗಡೆ, ಗಣಪತಿ ಕಂಬಟೆ, ಶ್ರೀಕಾಂತ ಮೊಗೇರ, ನಿವೃತ್ತ ಶಿಕ್ಷಕ ಕೆ.ಎಸ್.ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘಟನೆಯ ಆರ್.ಕೆ.ಹೆಗಡೆ ಸ್ವಾಗತಿಸಿದರೆ, ಗೀತಾ ಹೆಗಡೆ ಹಾಗೂ ರಾಘವ ಹೆಗಡೆ ಅಭಿನಂದಿಸಿದರು. ನಿವೃತ್ತ ಉಪನ್ಯಾಸಕ ಕೆ.ಎಸ್.ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಕಲಾವಿದರ ಕೂಡುವಿಕೆಯಲ್ಲಿ ” ಪಾಪಣ್ಣ ವಿಜಯ ಗುಣಸುಂದರಿ” ಯಕ್ಷಗಾನ ಪ್ರದರ್ಶನಗೊಂಡಿತು.