ಜೋಯಿಡಾ: ಕುಣಬಿ ಸಮಾಜಕ್ಕೆ ಎಸ್‌ಟಿ ಮಾನ್ಯತೆ ಸಿಗಬೇಕು ಇದಕ್ಕೆ ಯಾರದೂ ತಕರಾರಿಲ್ಲ ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿದರು. ಅವರು ಕುಣಬಿ ಸಮಾಜದ 10ನೆ ದಿನದ ಸತ್ಯಾಗ್ರಹದ ಸಂದರ್ಭದಲ್ಲಿ ಜೊಯಿಡಾ ದ ಕುಣಬಿ ಭವನದಲ್ಲಿ ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬೇರೆ ಬೇರೆ ಕಾರಣಗಳಿಂದ ಮತ್ತು ಅಧಿಕಾರಿಗಳ ತಪ್ಪು ಧೋರಣೆಗಳಿಂದ ಆಗದೇ ಇರಬಹುದು. ಇದರಲ್ಲಿ ಯಾವುದೇ ರಾಜಕೀಯ ಪಕ್ಷದ ಹಸ್ತಕ್ಷೇಪವೂ ಇಲ್ಲ. ಕುಣಬಿ ಸಮಾಜ ಹಲವಾರು ವರ್ಷಗಳಿಂದ ಈ ಸಮಾಜ ಎಸ್‌ಟಿ ಸೇರಿಸಲು ಹೋರಾಡುತ್ತಿರುವುದು ತಿಳಿದಿದೆ. ನಾನು ಕೂಡ ಹಿಂದೆ ಈ ಬಗ್ಗೆ ಇಲ್ಲಿಯ ಮುಖಂಡರ ಜೊತೆ ಸೇರಿ ಪ್ರಯತ್ನಿಸಿದ್ದೇನೆ. ಈಗಲೂ ಕೂಡ ಎಸ್‌ಟಿಗೆ ಸೇರಿಸಲು ಯಾವ ತೊಂದರೆ ಇದೆ ಎಂದು ನೋಡಿ ತಿಳಿದು ಪ್ರಯತ್ನಿಸೋಣ. ಗೋವಾ ಕುಣಬಿಗಳನ್ನು ಎಸ್‌ಟಿಗೆ ಸೇರಿಸಲು ಯಾವ ಮಾನದಂಡ ಬಳಸಲಾಗಿದೆ. ಅದು ಇಲ್ಲಿ ನಡೆಯಬಹುದೆ ಎಂದು ತಿಳಿದು ಪ್ರಯತ್ನ ಮಾಡೋಣ ಎಂದರು. ಈಗ ನಿಮ್ಮ ಪ್ರಯತ್ನ ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ತಿಳಿದಿದೆ. ಸತ್ಯಾಗ್ರಹ ಹಿಂದೆ ಪಡೆಯಿರಿ ಎಂದರು. ಅಲ್ಲದೆ ನಿಮ್ಮ ಸಮಾಜದ ಜನರು ಯಾವುದೇ ಪಕ್ಷದ ಜನಪ್ರತಿನಿಧಿಗಳಿರಲಿ ರಾಜೀನಾಮೆ ನೀಡಬೇಡಿ ಎಲ್ಲರ ಸಹಕಾರದಿಂದ ಎಸ್‌ಟಿಗೆ ಸೇರಿಸೋಣ ಎಂದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಸುಭಾಷ ಗಾವುಡ, ತಾಲೂಕಾ ಅಧ್ಯಕ್ಷ ಅಜಿತ್ ಮಿರಾಶಿ ಕಾರ್ಯದರ್ಶಿ ಚಂದ್ರಶೇಕರ ಸತ್ಯಾಗ್ರಹದ ಹಿನ್ನಲೆ ವಿವರಿಸಿದರು.ವೇದಿಕೆಯಲ್ಲಿ ತಾಲೂಕಾ ಅಧ್ಯಕ್ಷ ಶಿವಾಜಿ ಗೋಸಾವಿ ಮಂಗೇಶ್ ದೇಶಪಾಂಡೆ ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸದರಿಗೆ ಮನವಿ ಪತ್ರ ನೀಡಲಾಯಿತು.