ಕಾರವಾರ: ಸಾರ್ವತ್ರಿಕ ಲೋಕಸಭಾ ಚುನಾವಣೆ- 2024ನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಮದ್ಯಗಳ ತಯಾರಿಕೆ, ಸಂಗ್ರಹಣೆ, ಮತ್ತು ಹಂಚಿಕೆಯನ್ನು ತಡೆಗಟ್ಟಲು ಹಾಗೂ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಹಾಗೂ ಮತ ಎಣಿಕೆ ನಡೆಯಲಿರುವ ಸಂದರ್ಭಗಳಲ್ಲಿ ಅಬಕಾರಿ ಅಕ್ರಮಗಳನ್ನು ಯಶಸ್ವಿಯಾಗಿ ತಡೆಗಟ್ಟಲು ಹಾಗೂ ಚುನಾವಣಾ ಸಂದರ್ಭದಲ್ಲಿ ಅನಧಿಕೃತವಾಗಿ ಗೋವಾ ರಾಜ್ಯದ ಮದ್ಯ/ ಫೆನ್ನಿ ಕಳ್ಳಭಟ್ಟಿ ಸರಾಯಿ, ನಕಲಿ ಮದ್ಯ. ನಕಲಿ ಸಾರಾಯಿ ಮುಂತಾದುವುಗಳನ್ನು ದಾಸ್ತಾನು ಮಾಡಿ ವಿತರಿಸುವಂತಹ ಅಕ್ರಮಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕರ್ತವ್ಯ ನಿರ್ವಹಿಸಿ. ಅಕ್ರಮಗಳನ್ನು ಪತ್ತೆಹಚ್ಚಿ, ಕಾನೂನು ಕ್ರಮ ಜರುಗಿಸಲು ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆಯು ನಡೆಯುವಂತೆ ನೋಡಿಕೊಳ್ಳಲು ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಲು ಮತ್ತು ಚುನಾವಣೆ ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಜಿಲ್ಲಾ ದಂಡಾಧಿಕಾರಿಗಳು ಮದ್ಯ ಮಾರಾಟ ನಿಷೇಧಿಸಿ ಹೊರಡಿಸುವ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲೆಯಾದ್ಯಂತ ತಾಲೂಕು ತಂಡ ಹಾಗೂ ಜಿಲ್ಲಾ ತಂಡಗಳನ್ನು ರಚಿಸಿ, ದಿನದ 24 ಗಂಟೆಯು ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ತಂಡದ ವಿವರ: ಜಿಲ್ಲಾ ತಂಡದ (ಅಬಕಾರಿ ಆಯುಕ್ತರ ಕಚೇರಿ) ಮುಖ್ಯಸ್ಥರು ಹಾಗೂ ಅಬಕಾರಿ ನಿರೀಕ್ಷಕರು ವಿಜಯ ಮಾಂತೇಶ ಲಮಾಣಿ ಮೊಬೈಲ್ ಸಂ: 9880000400, ಜಿಲ್ಲಾ ಕಂಟ್ರೋಲ್ ರೂಮ್ ಟೋಲ್ ಫ್ರೀ ನಂ: 18005997094, ದೂರವಾಣಿ ಸಂಖ್ಯೆ: 08382- 227094. ತಾಲೂಕು ತಂಡದ ಕಾರವಾರ ವಲಯದ ಮುಖ್ಯಸ್ಥರು ಹಾಗೂ ಅಬಕಾರಿ ನಿರೀಕ್ಷಕರು ರಂಜಿತ ಕುಮಾರ ಮಿತ್ರಾ ಮೊಬೈಲ್ ಸಂ: 9611063458, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08382-228751, ಅಂಕೋಲಾ ವಲಯದ ಮುಖ್ಯಸ್ಥರು ಹಾಗೂ ಅಬಕಾರಿ ನಿರೀಕ್ಷಕರು ಚಾಲಕ್ಯ ಶಹಾಪುರ ಮೊಬೈಲ್ ಸಂ: 7483970134, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08388-230440, ಕುಮಟಾ ವಲಯದ ಮುಖ್ಯಸ್ಥರು ಹಾಗೂ ಅಬಕಾರಿ ನಿರೀಕ್ಷಕರು ನವೀನಕುಮಾರ ಮೊಬೈಲ್ ಸಂ: 8310990087, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08386-220367, ಹೊನ್ನಾವರ ವಲಯದ ಮುಖ್ಯಸ್ಥರು ಹಾಗೂ ಅಬಕಾರಿ ನಿರೀಕ್ಷಕರು ಚೇತನಕುಮಾರ ಮೊಬೈಲ್ ಸಂ: 8660144726, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08387-200306, ಭಟ್ಕಳ ವಲಯದ ಮುಖ್ಯಸ್ಥರು ಹಾಗೂ ಅಬಕಾರಿ ನಿರೀಕ್ಷಕರು ಸುನೀತಾ ಮೊಬೈಲ್ ಸಂ: 6364161330, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08385-295235, ಶಿರಸಿ ವಲಯದ ಮುಖ್ಯಸ್ಥರು ಹಾಗೂ ಅಬಕಾರಿ ನಿರೀಕ್ಷಕರು ರವಿನಾರಾಯಣ ಮಳೇಕರ ಮೊಬೈಲ್ ಸಂ: 8660268393/ 9449597122, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08384-224168, ಸಿದ್ದಾಪುರ ತಹಶಿಲ್ದಾರ ಕಚೇರಿಯ ತಂಡದ ಮುಖ್ಯಸ್ಥರು ಹಾಗೂ ಅಬಕಾರಿ ನಿರೀಕ್ಷಕರು ತಿರುಮಲ್ಲೇಶ ಎಂ.ಹೆಚ್ ಮೊಬೈಲ್ ಸಂ: 7892718149, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08389-230127, ಯಲ್ಲಾಪುರ ವಲಯದ ಮುಖ್ಯಸ್ಥರು ಹಾಗೂ ಅಬಕಾರಿ ನಿರೀಕ್ಷಕರು ಸುಮಾ ಜಿ.ಎಂ ಮೊಬೈಲ್ ಸಂ: 8971264864, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08419-261510, ಮುಂಡಗೋಡ ತಹಶಿಲ್ದಾರ ಕಚೇರಿಯ ತಂಡದ ಮುಖ್ಯಸ್ಥರು ಹಾಗೂ ಅಬಕಾರಿ ನಿರೀಕ್ಷಕರು ಸುಬ್ರಮಣ್ಯ ಪೈ ಮೊಬೈಲ್ ಸಂ: 9844547167, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08301-222122, ದಾಂಡೇಲಿ ಮತ್ತು ಹಳಿಯಾಳ ವಲಯದ ಮುಖ್ಯಸ್ಥರು ಹಾಗೂ ಅಬಕಾರಿ ನಿರೀಕ್ಷಕರು ವಿಜಯಕುಮಾರ ಮೊಬೈಲ್ ಸಂ: 9902995400, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08284-232805, ಜೋಯಿಡಾ ತಹಶೀಲ್ದಾರ ಕಚೇರಿಯ ತಂಡದ ಮುಖ್ಯಸ್ಥರು ಹಾಗೂ ಅಬಕಾರಿ ನಿರೀಕ್ಷಕರು ಸೈಯದ್ ಶಬೀರ ಮೊಬೈಲ್ ಸಂ: 9448170406, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08383-282723 ಗಳಿಗೆ ಸಾರ್ವಜನಿಕರು ಯಾವುದೇ ರೀತಿಯ ಅನಧೀಕೃತ ಮದ್ಯದ ದಾಸ್ತಾನು, ಸಾಗಾಟ, ಮಾರಾಟ ಅಥವಾ ತಯಾರಿಕೆಗೆ ಸಂಬಂಧಿಸಿದ ವ್ಯವಹಾರಗಳು ಕಂಡುಬಂದಲ್ಲಿ ಮೇಲ್ಕಾಣಿಸಿದ ಅಧಿಕಾರಿಗಳಿಗೆ ಅವರ ಮೊಬೈಲ್ ಅಥವಾ ಸಂಬಂಧಿತರ ಕಚೇರಿಗಳ ಸ್ಥಿರ ದೂರವಾಣಿಗೆ ಅಥವಾ ತಾಲೂಕು ಕಂಟ್ರೋಲ್ ರೂಮುಗಳಿಗೆ ಮಾಹಿತಿಯನ್ನು ನೀಡಬಹುದಾಗಿದೆ
ಅದೇ ರೀತಿ ಕಾರವಾರ ಮತ್ತು ಅಂಕೋಲಾ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ರಮೇಶ ಭಜಂತ್ರಿ ಮೊಬೈಲ್ ಸಂ: 9731098177, ಸ್ಥಿರ ದೂರವಾಣಿ ಸಂಖ್ಯೆ : 08382-228741, ಹೊನ್ನಾವರ, ಕುಮಟಾ ಮತ್ತು ಭಟ್ಕಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಆನಂದಕುಮಾರ ಮೊಬೈಲ್ ಸಂ: 9845904954, ಸ್ಥಿರ ದೂರವಾಣಿ ಸಂಖ್ಯೆ : 08387-220912, ಶಿರಸಿ ಮತ್ತು ಸಿದ್ದಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಹೆಚ್.ಎಸ್ ಶಿವಪ್ಪ ಮೊಬೈಲ್ ಸಂ: 9980503567, ಸ್ಥಿರ ದೂರವಾಣಿ ಸಂಖ್ಯೆ : 08384-225469, ಯಲ್ಲಾಪುರ, ಮುಂಡಗೋಡ, ಜೋಯಿಡಾ, ಹಳಿಯಾಳ ಮತ್ತು ದಾಂಡೇಲಿ ಉಪ ವಿಭಾಗದ ಉಪ ಅಧೀಕ್ಷಕ ಶಂಕರಗೌಡ ಪಾಟೀಲ್ ಮೊಬೈಲ್ ಸಂ: 9449597124 / 9448876469 ಸ್ಥಿರ ದೂರವಾಣಿ ಸಂಖ್ಯೆ :08419-261486 ಈ ವ್ಯಾಪ್ತಿಯ ಸಂಬಂಧಿಸಿದ ದೂರುಗಳ ಮಾಹಿತಿಯನ್ನು ಸಾರ್ವಜನಿಕರು ನೀಡಬಹುದಾಗಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಡೆಪ್ಯೂಟಿ ಕಮೀಷನರ್ ಎಕ್ಸೆÊಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.