Slide
Slide
Slide
previous arrow
next arrow

ಅಂಗಡಿಗೆ ಕನ್ನ ಹಾಕಿದ್ದ ಕಳ್ಳನ ಬಂಧನ

300x250 AD

ಬನವಾಸಿ: ಅಂಗಡಿಗೆ ಕನ್ನ ಹಾಕಿ ನಗದು ದೋಚಿದ್ದ ಕಳ್ಳನನ್ನು ಹಿಡಿಯುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಬನವಾಸಿಯ ಜನತಾ ಕಾಲೋನಿಯ ಕಿರಣ್ ಶೇಟ್ ಎಂಬುವವರು ತಮ್ಮ ಅಂಗಡಿಯಲ್ಲಿ ಕಳ್ಳತನವಾಗಿದ್ದು ಅಂದಾಜು 35500/ ನಗದು ಹಾಗೂ ಎಟಿಎಮ್ ಕಾರ್ಡ್ ಕಳುವಾಗಿದೆ ಎಂದು ದೂರು ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡ ಪೋಲಿಸರು ಕಾರ್ಯಪ್ರವೃತ್ತರಾಗಿದ್ದು, ಆರೋಪಿ ಶಿರಸಿಯ ನೆಹರು ನಗರದ ಯಾಸೀನ್ ಎಂಬಾತನನ್ನು ಬಂಧಿಸಿ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ‌.

ಈ ಕಾರ್ಯಾಚರಣೆಯಲ್ಲಿ ಪೋಲಿಸ್ ಅಧೀಕ್ಷಕ ವಿಷ್ಣುವರ್ಧನ್ ಎನ್.,ಸಿ.ಟಿ.ಜಯಕುಮಾರ್, ಉಪಾಧೀಕ್ಷಕ ಎಂ.ಎಸ್.ಪಾಟೀಲ್ ಮಾರ್ಗದರ್ಶನದಲ್ಲಿ, ಸಿಪಿಐ ಶಶಿಕಾಂತ್ ವರ್ಮಾ ನೇತೃತ್ವದಲ್ಲಿ, ಪಿಎಸ್ಐ ಚಂದ್ರಕಲಾ ಪತ್ತಾರ್, ಸುನಿಲ್‌ಕುಮಾರ್ ಬಿ.ವೈ, ಎಂ.ಕೆ ಮೇಸ್ತ್ರಿ, ಸಿಬ್ಬಂದಿಗಳಾದ ಚಂದ್ರಪ್ಪ ಕೊರವರ, ಬಸವರಾಜ ಜಾಡರ್, ಮಂಜುನಾಥ ನಡುವಿನಮನಿ, ನಾರಾಯಣ, ಗಣೇಶ್, ಮಂಜಪ್ಪ ಮುಂತಾದವರು ಸಹಕರಿಸಿದ್ದರು.

300x250 AD
Share This
300x250 AD
300x250 AD
300x250 AD
Back to top