ಮುಂಡಗೋಡ : ತಾಲೂಕಿನ ಸನವಳ್ಳಿ ಗ್ರಾಮದ ಭಾಗದಲ್ಲಿರುವ ಗದ್ದೆಗಳಿಗೆ ಡ್ಯಾಮ್‌ನ ನೀರು ಪೂರೈಸುವಂತೆ ಬುಧವಾರ ಗ್ರೇಡ್ 2 ತಹಸಿಲ್ದಾರ್ ಜಿ.ಬಿ. ಭಟ್ ರವರಿಗೆ ರೈತರು ಮನವಿ ಸಲ್ಲಿಸಿದರು.
ಸನವಳ್ಳಿ ಗ್ರಾಮದಲ್ಲಿ 50 ಎಕರೆ ಅಡಿಕೆ ತೋಟ ಮತ್ತು 40 ಎಕರೆ ಗೋವಿನ ಜೋಳದ ಬೆಳೆಗಳನ್ನು ಬೆಳೆಯಲಾಗಿದೆ. ಈ ಭಾಗದ ಗದ್ದೆಗಳಲ್ಲಿರುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ನೀರು ಬತ್ತಿ ಹೋಗಿರುವುದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಬೆಳೆಗಳು ನೀರು ಇಲ್ಲದೆ ಬಿಸಿಲಿನ ತಾಪಮಾನಕ್ಕೆ ಬೆಳೆಗಳು ಒಣಗಿ ಹೋಗುತ್ತಿವೆ. ಬೆಳೆಗಳಿಗೆ ನೀರಿನ ಅವಶ್ಯಕತೆ ಇರುವುದರಿಂದ ಡ್ಯಾಮ್‌ನಲ್ಲಿ ನೀರಿನ ಪ್ರಮಾಣ ಹೆಚ್ಚಿಗೆ ಇರುತ್ತದೆ, ಡ್ಯಾಮ್ ನೀರನ್ನು ಹೊಲಗಳಿಗೆ ಪೂರೈಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ
ಈ ವೇಳೆ ಮಂಜುನಾಥ ಕೋಣನಕೇರಿ ನಾಗರಾಜ ಗುಬ್ಬಕ್ಕನವರ, ವಿಜಿ ಹಿರೇಮಠ, ಪರಶುರಾಮ, ಶರೀಫ, ಗಿರೀಶ ಆರೋಗೊಪ್ಪ
ಉಪಸ್ಥಿತರಿದ್ದರು.