Slide
Slide
Slide
previous arrow
next arrow

ಇಂದಿನಿಂದ ಅವಧೂತ ಕಲ್ಲೇಶ್ವರ ಸ್ವಾಮಿಗಳ ಪುಣ್ಯಾರಾಧನೆ

300x250 AD

ಶಿರಸಿ: ಶ್ರೀ ಸದ್ಗುರು ಅವಧೂತ ಕಲ್ಲೇಶ್ವರ ಸ್ವಾಮಿಗಳ 17ನೇ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಶಿರಸಿ ತಾಲೂಕಿನ ಶ್ರೀ ಕ್ಷೇತ್ರ ಅಂಡಗಿ ಮಠದಲ್ಲಿ ನಡೆಯಲಿದೆ.

ಪೂಜ್ಯ ಸ್ವಾಮೀಜಿಗಳು ಹಾಗೂ ಗುರುವರ್ಯರ ದಿವ್ಯ ಉಪಸ್ಥಿತಿಯಲ್ಲಿ ಹೋಮ ಹವನ,ಶ್ರೀ ಕಲ್ಲೇಶ್ವರ ಅಷ್ಟೋತ್ತರ ಶತನಾಮಾವಳಿ ಪಠಣ, ಮಹಾಮಂಗಳಾರತಿ, ಭಕ್ತಿ ಸಂಗಿತ, ಬಯಲಾಟ, ದೀಪೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ‌.

300x250 AD

ಎರಡು ದಿನಗಳ ಕಾಲ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ಪೂರ್ವಭಾವಿಯಾಗಿ ಈಗಾಗಲೇ ಶಿರಸಿ, ಸಿದ್ದಾಪುರ, ಸೊರಬ, ಮುಂಡಗೋಡ,ಹುಬ್ಬಳ್ಳಿ ಧಾರವಾಡ,ಸವದತ್ತಿ,ಮಲ್ಲಪುರ,ಚುಳಕಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಬೈಕ್ ಜಾತಾ ಮೂಲಕ ಪ್ರಚಾರ ಕಾರ್ಯವನ್ನು ನಡೆಸಲಾಗಿದ್ದು, ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಸಂಘಟಕರು ಈ ಮೂಲಕ ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top