Slide
Slide
Slide
previous arrow
next arrow

ಜಿಲ್ಲಾಧಿಕಾರಿ ವಿಶೇಷ ಕಾಳಜಿ: ಗುತ್ತಿಗೆ ಪೌರ ಕಾರ್ಮಿಕರಿಗೆ ಖಾಯಂ ಭಾಗ್ಯ

300x250 AD

ಕಾರವಾರ: ಪೌರ ಕಾರ್ಮಿಕರ  ಅಭಿವೃದ್ಧಿ ಬಗ್ಗೆ ಮತ್ತು ಅವರ ಸಮಸ್ಯೆಗಳ ನಿವಾರಣೆ ಕುರಿತಂತೆ ವಿಶೇಷ ಕಾಳಜಿ ವಹಿಸುವ ಮತ್ತು ಅವರ ಸಮಸ್ಯೆಗಳಿಗೆ ಸದಾ ಸಕಾರಾತ್ಮಕವಾಗಿ  ಸ್ಪಂದಿಸುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪೌರ ಕಾರ್ಮಿಕರು ತಮ್ಮ ಜೀವನದಲ್ಲಿ ಸದಾ ಸ್ಮರಿಸುವ  ಮಹತ್ತರವಾದ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 127  ಮಂದಿ ಪೌರ ಕಾರ್ಮಿಕರ ವರ್ಷಗಳ ಕನಸು ನನಸಾಗಿದೆ. ಇವರೆಲ್ಲರಿಗೂ ಖಾಯಂಗೊಳಿಸುವ  ಆದೇಶವನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೊರಡಿಸಿದ್ದು ಮಾರ್ಚ್ 11 ರಂದು ಆದೇಶ ಪತ್ರ ಕೈ ಸೇರಲಿದೆ.

ಸರ್ಕಾರದ 2022 ರ ಪೌರ ಕಾರ್ಮಿಕರ ನೇಮಕಾತಿ ಅಧಿಸೂಚನೆ ಯಡಿ  ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಟ 2 ವರ್ಷ ದಿನಗೂಲಿ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಆದೇಶದಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ  ಅರ್ಹರಿದ್ದ 127 ಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ನೇಮಿಸಲಾಗುತ್ತಿದೆ.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ  ಖಾಲಿ ಇದ್ದ 127 ಪೌರ ಕಾರ್ಮಿಕರ ಹುದ್ದೆಗಳ ಖಾಯಂ ನೇಮಕಾತಿ ಕುರಿತಂತೆ ಈಗಾಗಲೇ ದಿನಗೂಲಿ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡಿದ್ದು, ಸ್ಥಳೀಯ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಿಂತ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದಲ್ಲಿ , ಹೆಚ್ಚುವರಿ ಅರ್ಜಿಗಳನ್ನು  ತಿರಸ್ಕೃತಗೊಳಿಸದೆ, ಅವುಗಳನ್ನು ಕಡಿಮೆ ಅರ್ಜಿ ಸಲ್ಲಿಕೆಯಾಗಿದ್ದ ನಗರ ಸ್ಥಳೀಯ ಸಂಸ್ಥೆಗೆ ವರ್ಗಾಯಿಸುವ ಮೂಲಕ ಅರ್ಹ ಎಲ್ಲರು ಉದ್ಯೋಗ ಪಡೆಯಲು ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿದ್ದಾರೆ.

300x250 AD

ಪೌರ ಕಾರ್ಮಿಕರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಆಯ್ಕೆಪಟ್ಟಿ ಪ್ರಕಟಗೊಂಡ ನಂತರ ಎಲ್ಲಾ ಅಭ್ಯರ್ಥಿಗಳಿಗೂ, ನೇಮಕಾತಿ ಆದೇಶ ಪಡೆಯಲು ಅಗತ್ಯವಿದ್ದ ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಇದ್ದ ತೊಡಕುಗಳನ್ನು ನಿವಾರಿಸಿ ಎಲ್ಲಾರಿಗೂ ಸಿಂಧುತ್ವ ಪ್ರಮಾಣ ಪತ್ರ   ದೊರೆಯುವಂತೆ ಮಾಡುವ ಮೂಲಕ ಪೌರ ಕಾರ್ಮಿಕರ ಕುಟುಂಬಗಳಲ್ಲಿ ಸಂತಸ ಮೂಡಿಸಿದ್ದಾರೆ.

ಕೋಟ್:
ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನು ಸ್ವಚ್ಚ ಮತ್ತು ಸುಂದರಗೊಳಿಸಿ ನೈರ್ಮಲ್ಯ ಕಾಪಾಡುವ ಮೂಲಕ ಆರೋಗ್ಯವಂತ ವಾತಾವರಣ ನಿರ್ಮಾಣ ಮಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಗಣನಿಯವಾದುದು. ಅವರ ಸೇವೆಯನ್ನು ಪತ್ರಿಯೊಬ್ಬ ಸಾರ್ವಜನಿಕರು ಗೌರವಿಸುವುದು ಅತ್ಯಂತ ಅಗತ್ಯ. ಜಿಲ್ಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 127 ಪೌರ ಕಾರ್ಮಿಕರನ್ನು ಖಾಯಂ ಗೊಳಿಸಲಾಗುತ್ತಿದ್ದು, ನೇಮಕಾತಿ ಪ್ರಕ್ರಿಯೆಯನ್ನು  ಪಾರದರ್ಶಕವಾಗಿ ಮತ್ತು ಶೀಘ್ರವಾಗಿ ಮಾಡಲಾಗಿದೆ. ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಏಕ ಕಾಲದಲ್ಲಿ  ಗರಿಷ್ಠ ಸಂಖ್ಯೆಯ ಪೌರ ಕಾರ್ಮಿಕರ ನೇರ ನೇಮಕಾತಿ ನಡೆಸಲಾಗಿದೆ : ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ

Share This
300x250 AD
300x250 AD
300x250 AD
Back to top