Slide
Slide
Slide
previous arrow
next arrow

ವ್ಯವಸ್ಥಿತ ಸಮಾಜ ನಿರ್ಮಾಣದಲ್ಲಿ ನಾಟಕದ ಪಾತ್ರ ಮಹತ್ವದ್ದು: ರವೀಂದ್ರ ಹಿರೇಕೈ

300x250 AD

ಸಿದ್ದಾಪುರ: ವ್ಯವಸ್ಥಿತವಾದ ಸಮಾಜ ನಿರ್ಮಾಣ ಮಾಡುವಲ್ಲಿ ಹಾಗೂ ಸಮಾಜದ ಸ್ಥಿತಿಯನ್ನು ಜನರೆದುರು ಸಮರ್ಥವಾಗಿ ಇಡಲು ನಾಟಕ ಪ್ರದರ್ಶನ ಹೆಚ್ಚು ಪ್ರಭಾವಶಾಲಿ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಹೇಳಿದರು.

ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯ ಸಭಾಂಗಣದಲ್ಲಿ ರಂಗಸೌಗಂಧ ಸಿದ್ದಾಪುರ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಯೋಗದಲ್ಲಿ ದಿ.ಹುಲಿಮನೆ ಸೀತಾರಾಮ ಶಾಸ್ತ್ರೀ ನೆನಪಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮೂರು ದಿನಗಳ ಗ್ರಾಮೀಣ ರಂಗೋತ್ಸವ ಉದ್ಘಾಟಿಸಿ ಅವರು ಶನಿವಾರ ಮಾತನಾಡಿ, ರಂಗ ಸೌಗಂಧ ತಂಡ ರಂಗಚಟುವಟಿಕೆಗಳನ್ನು ನಡೆಸುವದರ ಜತೆಗೆ ಸಾಧಕರಿಗೆ ರಂಗ ಗೌರವ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಪತ್ರಕರ್ತ ನಾಗರಾಜ ಮತ್ತಿಗಾರ ಮಾತನಾಡಿ ರಂಗ ಸೌಗಂಧ ತಂಡ ಮುಂದಿನ ದಿನದಲ್ಲಿ ಈ ಹಿಂದಿನಂತೆ ಪೌರಾಣಿಕ ಹಾಗೂ ಐತಿಹಾಸಿಕ ನಾಟಕವನ್ನು ಪ್ರದರ್ಶನ ಮಾಡುವುದಕ್ಕೆ ಮುಂದಾಗಬೇಕೆಂದರು.
ಗಜಾನನೋತ್ಸವ ಸಮಿತಿ ಅಧ್ಯಕ್ಷ ಎಲ್.ಜಿ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಅನಂತ ಹೆಗಡೆ ಹೊಸಗದ್ದೆ ಉಪಸ್ಥಿತರಿದ್ದರು.

300x250 AD

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ನಾಗರಾಜ ಭಟ್ಟ ಕೆಕ್ಕಾರ ಹಾಗೂ ಲತಾ ಭಟ್ಟ ದಂಪತಿಯನ್ನು ರಂಗ ಸೌಗಂಧ ತಂಡದಿಂದ ರಂಗ ಗೌರವ ನೀಡಿ ಗೌರವಿಸಲಾಯಿತು. ರಂಗ ಗೌರವ ಪ್ರಶಸ್ತಿ ಸ್ವೀಕರಿಸಿ ನಾಗರಾಜ ಭಟ್ಟ ಕೆಕ್ಕಾರ ಮಾತನಾಡಿ ರಂಗ ಸೌಗಂಧ ತಂಡದ ಕಾರ್ಯಚಟುವಟಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ದಿ.ಎನ್.ಎಸ್.ರಾವ್ ಮೂಲ ರಚನೆಯ ’36 ಅಲ್ಲ 63′ ನಾಟಕವನ್ನು ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. ಶ್ರೀಪಾದ ಹೆಗಡೆ ಕೋಡನಮನೆ ವಿನ್ಯಾಸದ ರಾಜೇಂದ್ರ ಕೊಳಗಿ ಸಂಗೀತ ನಿರ್ದೇಶನ. ನಾಗರಾಜ ಜೋಗಿ ಹಾಗೂ ದತ್ತಾತ್ರಯ ಹೆಗಡೆ ಹುಕ್ಲಮಕ್ಕಿ ಸಂಗೀತ ನಿರ್ವಹಣೆ ಹಾಗೂ ಪೂರ್ಣಚಂದ್ರ ಹೆಗಡೆ ಹುಲಿಮನೆ ಮತ್ತು ಶಮಂತ ಹೆಗಡೆ ಶಿರಳಗಿ ಇವರು ತಾಂತ್ರಿಕ ಸಹಕಾರ ನೀಡಿದ್ದಾರೆ.
ರಂಗದಲ್ಲಿ ಗಣಪತಿ ಹೆಗಡೆ ಗುಂಜಗೋಡು, ನಾಗಪತಿ ಭಟ್ಟ ವಡ್ಡಿನಗದ್ದೆ, ಅಜಿತ ಹೆಗ್ಗಾರಳ್ಳಿ, ಶ್ರೀಪಾದ ಹೆಗಡೆ ಕೋಡನಮನೆ, ಪ್ರವೀಣಾ ಹೆಗಡೆ ಗುಂಜಗೋಡ ವಿವಿಧ ಪಾತ್ರ ನಿರ್ವಹಿಸಿ ಮೆಚ್ಚುಗೆಗಳಿಸಿದರು.
ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿದರು.ಗಣಪತಿ ಹೆಗಡೆ ಗುಂಜಗೋಡು ಜಯರಾಮ ಭಟ್ಟ, ರಾಜಾರಾಮ ಭಟ್ಟ ಹೆಗ್ಗಾರಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top