Slide
Slide
Slide
previous arrow
next arrow

ಮಂಗನಖಾಯಿಲೆ: ಮೃತರ ಕುಟುಂಬಸ್ಥರಿಗೆ ಸಂಸದ ಅನಂತಕುಮಾರ್ ಸಾಂತ್ವನ

300x250 AD

ಸಿದ್ದಾಪುರ: ತಾಲೂಕಿನಲ್ಲಿ ಮಂಗನಕಾಯಿಲೆಯಿಂದ ಸಾವನ್ನಪ್ಪಿದ ಮನೆಗಳಿಗೆ ಸಂಸದ ಅನಂತಕುಮಾರ ಹೆಗಡೆ ಭೇಟಿ ನೀಡಿ ಸಾಂತ್ವನ ಹೇಳಿದರಲ್ಲದೆ ಜನರಲ್ಲಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅನಂತಕುಮಾರ್ ಹೆಗಡೆ, ಕಾಯಿಲೆಗಳು ವ್ಯಾಪಕವಾಗಿ ಹರಡುತ್ತಿದೆ. ಈ ಬಗ್ಗೆ ಜನರು ಹೆದರುವ ಕಾರಣವಿಲ್ಲ. ಅವಶ್ಯಕವಿರುವ ಔಷಧಗಳು ಸಿಗುವ ವ್ಯವಸ್ಥೆ ಮಾಡಲಾಗುವುದು. ಎರಡು ವರ್ಷಗಳಿಂದ ಲಸಿಕೆ ನೀಡುವುದು ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.ಚುಚ್ಚು ಮದ್ದು, ಲಸಿಕೆ ಬೇರೆ ಬೇರೆ ವಿಜ್ಞಾನದ ಕೆಲವೊಂದು ವಿಧಾನಗಳು ನಮಗೂ ತಿಳಿದಿರುವುದಿಲ್ಲ. ಲಸಿಕೆ ಹಲವು ವರ್ಷಗಳ ನಂತರ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದಕ್ಕೊಸ್ಕರ ಲಸಿಕೆ ಬಂದ್ ಮಾಡಿರಬಹುದು.ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಲಸಿಕೆ ಬಳಸಬೇಕು. ಕೇಂದ್ರ ಸರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನುದಾನ ನೀಡುತ್ತಿದೆ. ಏನಾದರೂ ಬೇಕಾದರೆ ನಾನು ಕೊಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.

300x250 AD

ಚುನಾವಣೆಯ ನಂತರದಲ್ಲಿ ಮಂಗನಕಾಯಿಲೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೆನೆ. ಮೃತರಿಗೆ ಪರಿಹಾರ ನೀಡುವುದು ರಾಜ್ಯಸರಕಾರದ ಜವಾಬ್ದಾರಿಯಾಗಿದೆ ಅವರು ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ ನಾಯ್ಕ,ಅರಣ್ಯಾಧಿಕಾರಿ ಬಸವರಾಜ ಬೊಚೊಳ್ಳಿ, ಕೆ.ಜಿ.ನಾಯ್ಕ,ಡಾ.ಶಶಿಭೂಷಣ ಹೆಗಡೆ,ತಿಮ್ಪಪ್ಪ ಮಡಿವಾಳ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top