ಜೊಯಿಡಾ: ತಾಲೂಕಿನಾದ್ಯಂತ ಮಹಾ ಶಿವರಾತ್ರಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಶಿವಭಕ್ತರು ಬೆಳ್ಳಂ ಬೆಳಿಗ್ಗೆಯಿಂದಲೆ ಶಿವಾಲಯಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಜೊಯಿಡಾದ ಶಿವಾಲಯ ಸಿದ್ದೇಶ್ವರ , ರಾಮಲಿಂಗ , ಕವಳ ಗುಹೇಶ್ವರ , ಯರಮುಖದ ಶ್ರೀ ಸೋಮೇಶ್ವರ , ಗುಂದದ ಸೋಮೇಶ್ವರ , ಶಿವಪುರದ ಈಶ್ವರ ರಾಮನಗರದ ರಾಮಲಿಂಗೇಶ್ವರ ಹೀಗೆ ಎಲ್ಲ ದೇವಾಲಯಗಳಲ್ಲಿ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ಹವನಗಳನ್ನು ನಡೆಸಲಾಯಿತು. ರಾತ್ರಿ ಜಾಗರಣೆ ಕೂಡ ಹಮ್ಮಿಕೊಳ್ಳಲಾಗಿದೆ. ಪೂಜೆ , ಭಜನೆ , ವಿಶೇಷ ಪ್ರಸಾದ ವಿತರಣೆ ಇಂದಿನ ಶಿವಪೂಜೆಯ ವಿಶೇಷವಾಗಿತ್ತು. ನಗರಿಯಲ್ಲಿ ಸಂತಸ ಸಡಗರ ಗಳ ನಡುವೆ ಚಂದ್ರಮೊಳೇಶ್ವರ ದೇವರ ಪೂಜೆಯೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೃತ್ಯ ವೈಭವ ಕಾರ್ಯಕ್ರಮ ಕೂಡ ನಡೆದಿದೆ ಎಂದು ಸಂದೀಪ್ ಗಾವುಡಾ ತಿಳಿಸಿದ್ದಾರೆ.