Slide
Slide
Slide
previous arrow
next arrow

ಮುಂಡಗೋಡಿನ ವಿವಿಧೆಡೆ ಶಿವನಿಗೆ ಪೂಜೆ ಸಲ್ಲಿಕೆ

300x250 AD

ಮುಂಡಗೋಡ: ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮೀಣ ಭಾಗದ ಶಿವನ ದೇವಾಲಯಗಳಲ್ಲಿ ಭಕ್ತರು ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.

ಪಟ್ಟಣದ ಈಶ್ವರ ದೇವಾಸ್ಥಾನದಲ್ಲಿ ಬೆಳಿಗ್ಗೆ ಪಂಚಾಮೃತ, ಮಹಾಭಿಷೇಕ, ಗಣಹೋಮ, ರುದ್ರಹವನ, ಹಣ್ಣುಕಾಯಿ ಸಮರ್ಪಣೆ ಸೇರಿ ವಿವಿಧ ಸೇವೆ ಸಲ್ಲಿಸಲಾಯಿತು. ತಾಲೂಕಿನ ಬೆಡಸಗಾಂವ ಶ್ರೀರಾಮಲಿಂಗೇಶ್ವರ ದೇವಸ್ಥಾನ, ಕೊಪ್ಪದ ಕಲ್ಲೇಶ್ವರ ದೇವಸ್ಥಾನ, ಕಿಲ್ಲೆ ಓಣಿಯ ಈಶ್ವರ ದೇವಸ್ಥಾನ, ಬಂಕಾಪೂರ ರಸ್ತೆಯಲ್ಲಿರುವ ಪಾರ್ವತಿ ಪರಮೇಶ್ವರ ದೇವಸ್ಥಾನ ಹೀಗೆ ವಿವಿಧ ದೇವಸ್ಥಾನಗಳಲ್ಲಿ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಶಿವನಾಮ ಸ್ಮರಣೆಯಲ್ಲಿ ನಿರತರಾಗಿದ್ದರು.

300x250 AD
Share This
300x250 AD
300x250 AD
300x250 AD
Back to top