ಹೊನ್ನಾವರ: ಪಟ್ಟಣದ ಎಸ್ಡಿಎಮ್ ಪದವಿ ಕಾಲೇಜಿನಲ್ಲಿ ಮಾ.7 ಮತ್ತು 8ರಂದು ಕಾಲೇಜಿನ ಐಕ್ಯೂಎಸಿ ವಿಭಾಗದಿಂದ ಭಾರತ ಸರ್ಕಾರದ ಅಂಗಸಂಸ್ಥೆಯಾದ ಸ್ಟಾರ್ ಕಾಲೇಜ್ ಪ್ರೊಗ್ರಾಮ್ ಡಿಪಾರ್ಟ್ಮೆಂಟ್ ಆಫ್ ಬಯೋಟೆಕ್ನಾಲಜಿ ಪ್ರಾಯೋಜಕತ್ವದಲ್ಲಿ ಜೆಎನ್ಸಿಎಎಸ್ಆರ್ ನ ವಿಜ್ಞಾನಿಗಳ ಭೇಟಿ ಕಾರ್ಯಕ್ರಮ ನಡೆಯಲಿದೆ ಎಂದು ಎಮ್ಪಿಇ ಸೊಸೈಟಿ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ ಹೇಳಿದರು.
ಈ ಕುರಿತು ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ಸರ್ಕಾರದ ಬಯೋಟೆಕ್ನಾಲಜಿ ಇಲಾಖೆಯ ನೀಡಿರುವ ಸ್ಟಾರ್ ಕಾಲೇಜ್ ಸ್ಕೀಮ್ಗೆ ಆಯ್ಕೆಯಾದ ಉತ್ತರಕನ್ನಡದ ಪ್ರಥಮ ಕಾಲೇಜು ಎಂದು ಹೇಳಲು ಹೆಮ್ಮೆ ಇದೆ.ವಿಜ್ಞಾನದಲ್ಲಿ ಮಕ್ಕಳಿಗೆ ವಿವಿಧ ಪ್ರಾಯೋಗಿಕ ತರಬೇತಿ,ಮಾಹಿತಿ ನೀಡಲು ಕೇಂದ್ರ ಸರ್ಕಾರದ ಅಂಗಸಂಸ್ಥೆಯಿಂದ 98ಲಕ್ಷ ಅನುದಾನ ನೀಡಿದೆ.ಈ ಅನುದಾನದ ಪ್ರಕಾರ ವಿಜ್ಞಾನದ ಪ್ರಾಯೋಗಿಕ ತರಬೇತಿ,ಶಿಕ್ಷಣ ನೀಡಲು ಕಾರ್ಯಕ್ರಮ ರೂಪಿಸಿದ್ದೇವೆ.ಜೆಎನ್ ಸಿಎಎಸ್ಆರ್ ಸಹಯೋಗದಲ್ಲಿ ನುರಿತ ವಿಜ್ಞಾನಿಗಳು ಕಾಲೇಜಿಗೆ ಭೇಟಿ ನೀಡಲಿದ್ದಾರೆ.ಅತ್ಯುತ್ತಮ ಪರಿಕರಗಳೊಂದಿಗೆ ಸಂಜೆ ನಕ್ಷತ್ರ ವಿಕ್ಷಣೆಗಾಗಿ ಅವಕಾಶ ಸಿಗಲಿದೆ ಎಂದರು.
ಇಂಗ್ಲೀಷ್ ವಿಭಾಗದ ಉಪನ್ಯಾಸಕರಾದ ಎಮ್.ಜಿ ಹೆಗಡೆ ಮಾತನಾಡಿ,ಜೆಎನ್ ಸಿಎಎಸ್ ಆರ್ ಎಂದರೆ ಭಾರತ ಸರ್ಕಾರದ ಅಧಿನದಲ್ಲಿರುವ ಸ್ವಾಯತ್ತ ಸಂಸ್ಥೆ.ಈ ಸಂಸ್ಥೆಯ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದ ಹೆಸರು ಮಾಡಿದ ವಿಜ್ಞಾನಿಗಳು,ಹಲವಾರು ಪ್ರತಿಷ್ಠಿತ ಪ್ರಶಸ್ತಿ ಪಡೆದ ವಿಜ್ಞಾನಿಗಳು ಎಸ್ ಡಿ ಎಮ್ ಕಾಲೇಜಿಗೆ ಉಪನ್ಯಾಸ ನೀಡಲು ಆಗಮಿಸುತ್ತಿದ್ದಾರೆ. ಇದು ಬಹಳ ಅಪರೂಪದ ಕಾರ್ಯಕ್ರಮವಾಗಿದೆ.ಈ ಭಾಗದ ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ಇದೊಂದು ಅತ್ಯುತ್ತಮವಾದ ಕಾರ್ಯಕ್ರಮ ಸದುಪಯೋಗಪಡಿಸಿಕೊಳ್ಳಿ ಎಂದರು.
ಐಕ್ಯೂಎಸಿ ಸಂಯೋಜಕ ಸುರೇಶ್ ಎಸ್. ಕಾರ್ಯಕ್ರಮಕ್ಕೆ ಆಗಮಿಸುವ ವಿಜ್ಞಾನಿಗಳ,ಗಣ್ಯರ ವಿವರ ನೀಡಿದರು.ಪ್ರೊಪೆಸರ್ ಸಿ.ಎನ್ ಆರ್ ರಾವ್ ಅವರು ಉದ್ಘಾಟನಾ ಸಮಾರಂಭದ ದಿನ ಆನ್ಲೈನ್ ಮೂಲಕ ಪಾಲ್ಗೊಂಡು ಶುಭ ಹಾರೈಸಲಿದ್ದಾರೆ ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಎಲ್ ಹೆಬ್ಬಾರ್ ಮಾತನಾಡಿ ಯಾವುದೇ ನೊಂದಾವಣೆ ಇಲ್ಲದೆ ಉಚಿತವಾಗಿ ನಡೆಯುವ ಕಾರ್ಯಕ್ರಮವಾಗಿದೆ. ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು,ಸಾರ್ವಜನಿಕರು ಇದರಲ್ಲಿ ಭಾಗವಹಿಸಬಹುದು,ವಿಜ್ಞಾನಿಗಳೊಂದಿಗೆಸಂವಾದ ಇರಲಿದೆ ಎಂದರು.
ಈ ಸಂದರ್ಭದಲ್ಲಿ ಸ್ಟಾರ್ ಕಾಲೇಜ್ ಸ್ಕೀಮ್ ಸಂಯೋಜಕ ಡಾ.ಮಂಜುನಾಥ ಹೆಗಡೆ, ಸಲಹೆಗಾರರಾದ ಡಾ.ಶಿವರಾಮ ಶಾಸ್ತ್ರಿ,ಡಾ.ಜಿ.ಎನ್ ಭಟ್,ಉಪನ್ಯಾಸಕರಾದ ವಿದ್ಯಾಧರ ನಾಯ್ಕ, ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು.